ಅಮೆರಿಕ ಕಾಂಗ್ರೆಸ್ ಕಟ್ಟಡ ಬಂದ್; ಬಳಿಕ ‘ಸುರಕ್ಷಿತ’
ವಾಶಿಂಗ್ಟನ್, ಜು. 8: ಅಮೆರಿಕದ ಶಾಸಕಾಂಗ ಕಾಂಗ್ರೆಸ್ ಇರುವ ಕಟ್ಟಡದಲ್ಲಿ ಬಂದೂಕುಧಾರಿಯೊಬ್ಬ ಅಡಗಿದ್ದಾನೆ ಎಂಬ ಸಂಶಯದಲ್ಲಿ ಪೊಲೀಸರು ಶುಕ್ರವಾರ ಸ್ವಲ್ಪ ಸಮಯ ಕಟ್ಟಡವನ್ನು ಸಂಪೂರ್ಣವಾಗಿ ಮುಚ್ಚಿದರು.
ಬಳಿಕ, ಸುದೀರ್ಘ ತಪಾಸಣೆಯ ಆನಂತರ, ಕಟ್ಟಡ ಸುರಕ್ಷಿತವಾಗಿದೆ ಎಂಬುದಾಗಿ ಪೊಲೀಸರು ಘೋಷಿಸಿದರು.
ಅದಕ್ಕೂ ಮೊದಲು, ಕಟ್ಟಡದಲ್ಲಿ ಒಂದು ವಿದ್ಯಮಾನ ನಡೆಯುತ್ತಿದೆ ಹಾಗಾಗಿ ಅದನ್ನು ಮುಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶಸ್ತ್ರವನ್ನು ಹೊಂದಿದ್ದಾಳೆನ್ನಲಾದ ಮಹಿಳೆಗಾಗಿ ಪೊಲೀಸರು ಕಟ್ಟಡದಲ್ಲಿ ತಪಾಸಣೆ ನಡೆಸುತ್ತಿದ್ದರು.
Next Story





