ಪೋಲ್ಯಾಂಡ್‌ಗೆ 1,000 ಸೈನಿಕರು: ಒಬಾಮ
ವಾರ್ಸಾ (ಪೋಲ್ಯಾಂಡ್), ಜು. 8: ನ್ಯಾಟೊ ಮೈತ್ರಿಕೂಟದ ಪೂರ್ವ ಭಾಗದಲ್ಲಿ ಅದರ ಉಪಸ್ಥಿತಿಯನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಅಮೆರಿಕವು ಪೋಲ್ಯಾಂಡ್‌ಗೆ ಹೆಚ್ಚುವರಿಯಾಗಿ 1,000 ಸೈನಿಕರನ್ನು ಕಳುಹಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ರಶ್ಯಕ್ಕೆ ತಡೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಪೋಲ್ಯಾಂಡ್ ಅಧ್ಯಕ್ಷ ಆ್ಯಂಡ್ರೇಝ್ ಡುಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷರು ಈ ವಿಷಯ ತಿಳಿಸಿದರು.
Next Story





