ಮಂಗಳನ ದಟ್ಟ ಸಾಲುಗಳು ಹರಿಯುವ ನೀರು
ವಾಶಿಂಗ್ಟನ್, ಜು. 8: ಮಂಗಳ ಗ್ರಹದ ಇಳಿಜಾರು ಪ್ರದೇಶಗಳಲ್ಲಿ ಕಂಡುಬರುವ ಕಡಿದಾದ ಗೆರೆಗಳು, ಋತುಗಳಿಗೆ ಅನುಗುಣವಾಗಿ ಬದಲಾಗುವ ದಟ್ಟ ಸಾಲುಗಳು ಹರಿಯುವ ನೀರಿನ ಉಪಸ್ಥಿತಿಯನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೆಂಪು ಗ್ರಹದ ವಾತಾವರಣದಲ್ಲಿರುವ ಇಂಥ ಸಾವಿರಾರು ಲಕ್ಷಣಗಳನ್ನು ಅಧ್ಯಯನ ಮಾಡಿದ ಬಳಿಕ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
ಮಂಗಳ ಗ್ರಹದ ಸಮವಿಭಾಜಕ ರೇಖೆಯ ಸಮೀಪದ ವ್ಯಾಲ್ಸ್ ಮರೀನರಿಸ್ ವಲಯದಲ್ಲಿ ಉಷ್ಣ ಋತುವಿನ ಅವಧಿಯಲ್ಲಿ ಕಂಡುಬಂದಿರುವ ಇಂಥ ಲಕ್ಷಣಗಳನ್ನು ಅವರು ಅಧ್ಯಯನ ಮಾಡಿದ್ದಾರೆ.
Next Story





