ವಿದ್ವೇಷಕಾರಿ ಭಾಷಣ: ವರುಣ್ ಗಾಂಧಿಗೆ ಸ್ಪೀಕರ್ ಮೂಲಕ ಕೋರ್ಟ್ ನೋಟಿಸ್
.jpg)
ಫಿಲಿಬಿಟ್, ಜುಲೈ 9: ದ್ವೇಷಕಾರುವ ಭಾಷಣ ಮಾಡಿದಕ್ಕಾಗಿ ಕಾನೂನು ಕ್ರಮಗಳನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿಗೆ ತನ್ನ ಮುಂದೆ ಹಾಜರಾಗುವಂತೆ ಫಿಲಿಬಿಟ್ ಜಿಲ್ಲಾ ಕೋರ್ಟ್‌ನೋಟಿಸ್ ಜಾರಿಗೊಳಿಸಿದೆ. ಈ ಮೊದಲು ನೋಟಿಸ್ ಜಾರಿಗೊಳಿಸಿದ್ದರೂ ವರುಣ್‌ಗಾಂಧಿ ಕೋರ್ಟಿಗೆ ಹಾಜರಾಗಿರಲಿಲ್ಲ ಈ ಬಾರಿ ಅವರಿಗೆ ಲೋಕಸಭೆ ಸ್ಪೀಕರ್ ಮೂಲಕ ನೋಟಿಸ್ ಕಳುಹಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಆಝಾದ್ ಹಯಾತ್ ವರುಣ್ ಗಾಂಧಿಯ ವಿರುದ್ಧ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಫಿಲಿಬಿಟ್ ಜಿಲ್ಲಾ ಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು ಸೆಪ್ಟಂಬರ್ ಮೂವತ್ತಕ್ಕೆ ಕೇಸು ಪರಿಗಣನೆಗೆ ಬರಲಿದೆ. ಪ್ರಾದೇಶಿಕ ಕೋರ್ಟೊಂದು ವರುಣ್‌ರನ್ನು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿತ್ತು. ನಂತರ ದೂರುದಾರರು ಜಿಲ್ಲಾಕೋರ್ಟಿಗೆ ದೂರು ಸಲ್ಲಿಸಿದ್ದರು. ವರುಣ್ ಗಾಂಧಿ2009ರ ಲೋಕಸಭೆ ಚುನಾವಣೆಯ ಪ್ರಚಾರದವೇಳೆ ದ್ವೇಷಪೂರಿತ ಭಾಷಣ ನೀಡಿದ್ದಾರೆಂದು ಆರೋಪ ಎದುರಿಸುತ್ತಿದ್ದಾರೆ.
Next Story





