Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾಕ್ ಪಾಪಕ್ಕಾಗಿ ಬ್ಲೇರ್ ವಿಚಾರಣೆ...

ಇರಾಕ್ ಪಾಪಕ್ಕಾಗಿ ಬ್ಲೇರ್ ವಿಚಾರಣೆ ಎದುರಿಸಲೇಬೇಕು

2002 ರಲ್ಲಿ ಇರಾಕ್‌ಗೆ ಹೋದ ಪತ್ರಕರ್ತರ ತಂಡದಲ್ಲಿದ್ದ ಇವಾನ್ ರಿಡ್ಲಿ

ವಾರ್ತಾಭಾರತಿವಾರ್ತಾಭಾರತಿ9 July 2016 1:53 PM IST
share
ಇರಾಕ್ ಪಾಪಕ್ಕಾಗಿ ಬ್ಲೇರ್ ವಿಚಾರಣೆ ಎದುರಿಸಲೇಬೇಕು

ಲಂಡನ್, ಜು.9: ಇಂಗ್ಲೆಂಡನ್ನು ಇರಾಕ್ ಯುದ್ಧದ ಭಾಗವಾಗಿಸುವ ನಿರ್ಧಾರವನ್ನು ಕೈಗೊಂಡಿದ್ದ ಮಾಜಿ ಪ್ರಧಾನಿ ಟೋನಿ ಬ್ಲೇರ್ ವಿಚಾರಣೆ ಎದುರಿಸಲೇಬೇಕು ಎಂದು 2002 ರಲ್ಲಿ ಇರಾಕ್‌ಗೆ ಹೋದ ಪತ್ರಕರ್ತರ ತಂಡದಲ್ಲಿದ್ದ ಇವಾನ್ ರಿಡ್ಲಿ ತಿಳಿಸಿದರು.

ಈ ಯುದ್ಧದಲ್ಲಿ ಮಡಿದ ಬ್ರಿಟಿಷ್ ಸೈನಿಕರ ಕುಟುಂಬಗಳು ಈಗಲೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿವೆಯೆಂದು ಹೇಳಿದ ಅವರು, ಒಬ್ಬ ವ್ಯಕ್ತಿಯ ಗುರಿ ಸಾಧನೆಗಾಗಿ ಹಲವರು ಬಲಿಯಾಗಬೇಕಾಗಿ ಬಂದಿದೆಯೆಂದಿದ್ದಾರೆ.

ಯುದ್ಧ ವಿಚಾರಣಾ ವರದಿಯಾದ ಚಿಲ್ಕೊಟ್ ವರದಿ ಬ್ಲೇರ್ ಅವರತ್ತ ಬೊಟ್ಟು ಮಾಡಿ ತೋರಿಸಿದ್ದರೂ ಅದು ನ್ಯಾಯ ಒದಗಿಸಲು ಅಸಮರ್ಥವಾಗಿದೆ ಎಂದು ಅವರು ತಿಳಿಸಿದ್ದಾರೆ.

ಚಿಲ್ಕೊಟ್ ವರದಿಯ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯುದ್ಧದಲ್ಲಿ ಭಾಗಿಯಾಗುವ ನಿರ್ಧಾರ ಕೈಗೊಂಡ ಟೋನಿ ಬ್ಲೇರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುವ ಅಗತ್ಯವಿದೆಯೆಂದು ಸ್ಕಾಟ್‌ಲ್ಯಾಂಡ್‌ನ ಮಾಜಿ ಸಚಿವ ಅಲೆಕ್ಸ್ ಸಾಲ್ಮಂಡ್ ಅಭಿಪ್ರಾಯಪಟ್ಟಿದ್ದಾರೆ ಎಂದು ರಿಡ್ಲಿ ತಿಳಿಸಿದ್ದಾರೆ.

ತಾನು ಸೆಪ್ಟೆಂಬರ್ 2002ರಲ್ಲಿ ಇತರ ಪತ್ರಕರ್ತರೊಂದಿಗೆ ಇರಾಕ್‌ಗೆ ಭೇಟಿ ನೀಡಿದ್ದಾಗ, ಆಗಿನ ಬ್ರಿಟಿಷ್ ಪ್ರಧಾನಿ ಬ್ಲೇರ್ ಸದ್ದಾಂನ ಬಂಕರ್‌ಗಳಲ್ಲಿ ಎಲ್ಲೆಲ್ಲಾ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಇಡಲಾಗಿದೆಯೆಂದು ಹೇಳಲಿದ್ದಾರೆಂದು ನಮಗೆ ತಿಳಿಸಲಾಯಿತು ಎಂದು ರಿಡ್ಲಿ ಕಾಮನ್ ಪ್ರೆಸ್‌ನಲ್ಲಿ ಪ್ರಕಟವಾದ ಬರಹವೊಂದರಲ್ಲಿ ಹೇಳಿದ್ದಾರೆ.

ಆಶ್ಚರ್ಯವೆಂಬಂತೆ ಇರಾಕ್‌ನ ಆಡಳಿತ ಬ್ಲೇರ್ ಗುರುತಿಸಿದ ಸ್ಥಳಗಳನ್ನು ವೀಕ್ಷಿಸಲು ನಮಗೆ ಸಂಪೂರ್ಣ ಅವಕಾಶ ನೀಡುವುದಾಗಿ ಹೇಳಿತ್ತು. ಇದನ್ನು ಬ್ಲೇರ್ ಅವರ ಘೋಷಣೆಯ ಮುಂಚಿತವಾಗಿ ಹೇಳಲಾಗಿತ್ತು. ಹಾಗೂ ನಾವು ಸರಕಾರಿ ಹೆಲಿಕಾಪ್ಟರ್‌ಗಳ ಬಳಿ ನಿಂತು ಕಾದಿದ್ದೆವು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬ್ಲೇರ್ ಶಸ್ತ್ರಾಸ್ತ್ರಗಳು ಎಲ್ಲಿತ್ತು ಎಂದು ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿದ ನಂತರ ನಾವು ಅವುಗಳನ್ನು ಹುಡುಕಿ ಹೊರಟರೂ ಅಲ್ಲಿ ಏನೂ ಕಾಣದೇ ಇದ್ದಾಗ, ವಿಶ್ವಸಂಸ್ಥೆಯ ಮುಖ್ಯ ಶಸ್ತ್ರಾಸ್ತ್ರ ಪರಿವೀಕ್ಷಕ ಹಾನ್ಸ್ ಬ್ಲಿಕ್ಸ್ ಅವರು ಅಭಿಪ್ರಾಯಪಟ್ಟಂತೆಯೇ ಸದ್ದಾಂ ಹುಸೇನ್ ಬಳಿ ಯಾವುದೇ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಲ್ಲವೆಂದು ತಿಳಿದುಕೊಂಡೆವು, ಎಂದು ರಿಡ್ಲಿ ವಿವರಿಸಿದ್ದಾರೆ.

''ಸರಕಾರಿ ಪ್ರಯೋಗಾಲಯವೊಂದರಲ್ಲಿ, ಶೀತಲೀಕರಣ ಕೇಂದ್ರದಲ್ಲಿ, ಫ್ರಿಜ್ ಗಳಲ್ಲಿ ಹಾಗೂ ಅದರೊಳಗಿದ್ದ ದ್ರವಗಳಲ್ಲಿ ಹಾಗೂ ಬಂಕರ್‌ಗಳಲ್ಲಿ ಎಲ್ಲಿಯಾದರೂ ಈ ಶಸ್ತ್ರಾಸ್ತ್ರ ಇರಬಹುದೇ ಎಂದು ಹುಡುಕಿದೆವು. ಯಾವುದೇ ಹಂತದಲ್ಲಿಯೂ ಇರಾಕ್ ಆಡಳಿತ ನಮಗೆ ತಡೆಯೊಡ್ಡಲಿಲ್ಲ ಎಂದು ಅವರು ಹೇಳಿದ್ದಾರೆ.

''ಅಂತಿಮವಾಗಿ ಈ ಯುದ್ಧದಲ್ಲಿ ಸಾಮಾನ್ಯ ಇರಾಕ್ ನಾಗರಿಕರು, ಸೈನಿಕರು ಪ್ರಾಣ ಕಳೆದುಕೊಂಡರು. ಆದರೆ ಬ್ಲೇರ್ ತನ್ನ ದೇಶಕ್ಕೆ ಸುಳ್ಳು ಹೇಳಿ ಮಾಧ್ಯಮ ತನಗೆ ಬೇಕಾದಂತೆ ಕುಣಿಯುವಂತೆ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಇದರ ಒಟ್ಟಾರೆ ಪರಿಣಾಮವಾಗಿ ಇಂದು ವೆಸ್ಟ್ ಮಿನಿಸ್ಟರ್‌ನಲ್ಲಿ ಪ್ರಜಾಪ್ರಭುತ್ವ ಪ್ರಕಿಯೆಯ ಮೇಲೆ ಬ್ರಿಟಿಷ್ ಮತದಾರರಿಗೆ ವಿಶ್ವಾಸ ಕುಂದಿದೆಯೆಂದು ಅವರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X