ಭಾರತ, ದ. ಆಫ್ರಿಕ ನಡುವೆ 8 ತಿಳುವಳಿಕೆ ಪತ್ರಗಳಿಗೆ ಸಹಿ

ಪ್ರಿಟೋರಿಯ (ದಕ್ಷಿಣ ಆಫ್ರಿಕ), ಜು. 9: ಭಾರತ ಮತ್ತು ದಕ್ಷಿಣ ಆಫ್ರಿಕಗಳ ನಡುವೆ ವಿಶಾಲ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಆಸ್ಪದ ನೀಡುವ ಎಂಟು ತಿಳುವಳಿಕೆ ಪತ್ರಗಳಿಗೆ ಉಭಯ ದೇಶಗಳ ಉದ್ಯಮ ನಾಯಕರು ಶುಕ್ರವಾರ ಸಹಿ ಹಾಕಿದರು.
ಪ್ರಿಟೋರಿಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಪ್ರಥಮ ಭೇಟಿಯ ವೇಳೆ ದಕ್ಷಿಣ ಆಫ್ರಿಕ-ಭಾರತ ಸಿಇಒಗಳ ವೇದಿಕೆಯಲ್ಲಿ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಲಾಯಿತು. ಹಣಕಾಸು, ರಾಜಕೀಯ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ತಿಳುವಳಿಕೆ ಪತ್ರಗಳು ಹೊಂದಿವೆ.
ಭಾರತದಲ್ಲಿ ಭೂಗತ ಗಣಿಕಾರಿಕೆಗಾಗಿ ಬಂಡೆ ಆಧರಣೆ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಹಿಂದೂಸ್ತಾನ್ ಝಿಂಕ್ ಲಿಮಿಟೆಡ್ ಮಿನೋವ ಆಫ್ರಿಕದೊಂದಿಗೆ ಎರಡು ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಿದೆ. ಜೊತೆಗೆ, ಗಣಿಗಾರಿಕೆ ಸಾಧನಗಳ ಪೂರೈಕೆ ಮತ್ತು ನಿರ್ವಹಣೆಗಾಗಿ ಅದು ಫೆರೆಮೆಲ್‌ನೊಂದಿಗೆ ಇನ್ನೊಂದು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ.
Next Story





