ಇಡಿಯಿಂದ ಎಲ್‌ಐಸಿ ಏಜೆಂಟ್ ಸೆರೆ
ವೀರಭದ್ರ ಸಿಂಗ್ ವಿರುದ್ಧದ ಪ್ರಕರಣ
ಶಿಮ್ಲಾ,ಜು.9: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ವಿರುದ್ಧದ ಹಣ ಚೆಲುವೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ)ವು ಎಲ್‌ಐಸಿ ಏಜೆಂಟ್ ಆನಂದ ಚೌಹಾಣ್ ಎಂಬಾತನನ್ನು ಶನಿವಾರ ಬಂಧಿಸಿದೆ. ಇದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿದೆ.
ವೀರಭದ್ರ ಸಿಂಗ್ ಯುಪಿಎ ಆಡಳಿತದಲ್ಲಿ 2009ರಿಂದ 2012ರವರೆಗೆ ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಹೆಸರುಗಳಲ್ಲಿ 6.03 ಕೋ.ರೂ.ಗಳ ಅಕ್ರಮ ಆಸ್ತಿಗಳನ್ನು ಹೊಂದಿದ್ದು ಇಡಿಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಿಲ್ಲಿಯ ನಿಯೋಜಿತ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಾಗಿದ್ದು,ಸಿಂಗ್ ಮತ್ತು ಅವರ ಪತ್ನಿ ಪ್ರತಿಭಾ ಸಿಂಗ್,ಚೌಹಾಣ್ ಮತ್ತು ಯೂನಿವರ್ಸಲ್ ಆ್ಯಪಲ್ ಅಸೋಸಿಯೇಟ್ಸ್ ಲಿ.ನ ಮಾಲಕ ಚುನ್ನಿ ಲಾಲ್ ಚೌಹಾಣ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಸಿಂಗ್ ತನ್ನ ವಿರುದ್ಧದ ಆರೋಪಗಳನ್ನು ಖಂಡತುಂಡವಾಗಿ ನಿರಾಕರಿಸಿದ್ದಾರೆ.
Next Story





