ಕುಸ್ತಿ ಚಾಂಪಿಯನ್‌ಶಿಪ್: ಥೋಮರ್, ನರಸಿಂಗ್‌ಗೆ ಪದಕ
ಮ್ಯಾಡ್ರಿಡ್, ಜು.9: ರಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತದ ಕುಸ್ತಿಪಟುಗಳಾದ ಸಂದೀಪ್ ಥೋಮರ್ ಹಾಗೂ ನರಸಿಂಗ್ ಯಾದವ್ ಸ್ಪೇನೀಶ್ ಗ್ರಾನ್‌ಪ್ರಿ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದ್ದಾರೆ.
ಶನಿವಾರ ಇಲ್ಲಿ ನಡೆದ 74 ಕೆಜಿ ತೂಕ ವಿಭಾಗದಲ್ಲಿ ಥೋಮರ್ ಬೆಳ್ಳಿ ಜಯಿಸಿದರು. 57 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ನರಸಿಂಗ್ ಕೆನಡಾದ ಕುಸ್ತಿಪಟು ಜಸ್ಮಿತ್ ಫುಲ್ಕರನ್ನು ಸೋಲಿಸಿದ್ದರು. ಆದರೆ, 2ನೆ ಸುತ್ತಿನಲ್ಲಿ ಲಿವಾನ್ ಲೊಪೆಝ್ ವಿರುದ್ಧ ಸೋತಿದ್ದರು. ಲಿವಾನ್ ಫೈನಲ್‌ಗೆ ತಲುಪಿದ ಕಾರಣ ನರಸಿಂಗ್‌ಗೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿ ಕಂಚಿನ ಪದಕ ಜಯಿಸಿದರು.
ಲಂಡನ್ ಒಲಿಂಪಿಕ್ಸ್‌ನ ಕಂಚಿನಪದಕ ಜಯಿಸಿದ್ದ ಯೋಗೇಶ್ವರ್ ದತ್ತ 64 ಕೆಜಿ ವಿಭಾಗದಲ್ಲಿ ಕ್ಯೂಬಾದ ಕುಸ್ತಿಪಟು ವಿರುದ್ಧ ಸೋತು ಬರಿಗೈಯಲ್ಲಿ ವಾಪಸಾದರು.
Next Story





