ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಯುದ್ಧಾಭ್ಯಾಸ
ಶಾಂಘೈ, ಜು. 9: ಚೀನಾದ ನೌಕಾಪಡೆಯು ದಕ್ಷಿಣದ ದ್ವೀಪ ರಾಜ್ಯ ಹೈನನ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿರುವ ಪಾರಾಸೆಲ್ ದ್ವೀಪಗಳ ಸಮೀಪ ಸಮರಾಭ್ಯಾಸ ನಡೆಸಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ದಕ್ಷಿಣ ಚೀನಾ ಸಮುದ್ರದ ಹಲವು ಭಾಗಗಳಲ್ಲಿ ಚೀನಾ ತನ್ನ ಹಕ್ಕು ಸ್ಥಾಪಿಸಿರುವುದನ್ನು ಪ್ರಶ್ನಿಸಿ ಫಿಲಿಪ್ಪೀನ್ಸ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಹೇಗ್‌ನಲ್ಲಿರುವ ಖಾಯಂ ಪಂಚಾಯಿತಿ ನ್ಯಾಯಾಲಯವು ಜುಲೈ 12 ರಂದು ನೀಡಲಿರುವ ತೀರ್ಪಿಗೆ ಪೂರ್ವಭಾವಿಯಾಗಿ ಚೀನಾ ಈ ಕಸರತ್ತು ನಡೆಸಿರುವುದು ಗಮನಾರ್ಹವಾಗಿದೆ.
Next Story





