ಸುಂಟರಗಾಳಿ: ಸಂತ್ರಸ್ತ 141 ಮನೆಗಳಿಗೆ ಪರಿಹಾರ ವಿತರಣೆ

ಹಿರಿಯಡ್ಕ, ಜು.9: ಬೊಮ್ಮರಬೆಟ್ಟು, ಪೆರ್ಡೂರು ಮತ್ತು ಬೆಳ್ಳರ್ಪಾಡಿ ಗ್ರಾಮಗಳಲ್ಲಿ ಇತ್ತೀಚೆಗೆ ಬೀಸಿದ ಭಾರೀ ಸುಂಟರಗಾಳಿಯಿಂದ ಹಾನಿಗೊಳಗಾದ ಒಟ್ಟು 141 (33 ಸಂಪೂರ್ಣ, 108 ಭಾಗಶಃ ಹಾನಿ)ಮನೆ ಗಳ ಸಂತ್ರಸ್ತ ಕುಟುಂಬಗಳಿಗೆ 36,25,144 ರೂ. ಪರಿಹಾರದ ಚೆಕ್‌ನ್ನು ಇಂದು ವಿತರಿಸಲಾಯಿತು. ಬೊಮ್ಮರಬೆಟ್ಟು ಗ್ರಾಮದ 47 (14 ಮನೆ ಸಂಪೂರ್ಣ, 33 ಮನೆ ಭಾಗಶಃ ಹಾನಿ)ಮನೆಗಳಿಗೆ 19,99,350 ರೂ., ಪೆರ್ಡೂರು ಗ್ರಾಮದ ಪಾಡಿಗಾರ್, ಪುತ್ತಿಗೆಯ ಒಟ್ಟು 45(9 ಸಂ., 36 ಭಾ.) ಮನೆಗಳಿಗೆ 6,45,910 ರೂ., ಬೆಳ್ಳರ್ಪಾಡಿ ಗ್ರಾಮದ 49 (10 ಸಂ., 39 ಭಾ.) ಮನೆಗಳಿಗೆ 9,79,884 ರೂ. ಪರಿಹಾರಧನದ ಚೆಕ್‌ನ್ನು ವಿತರಿಸಲಾಯಿತು. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ತಲಾ 95 ಸಾವಿರ ರೂ., ಭಾಗಶಃ ಹಾನಿಯಾದ ಮನೆಗಳಿಗೆ 8 ಸಾವಿರದಿಂದ 40 ಸಾವಿರ ರೂ.ವರೆಗೆ ಪರಿಹಾರ ಒದಗಿಸಲಾಗಿದೆ. ಬೊಮ್ಮರಬೆಟ್ಟು ಗ್ರಾಪಂ ವತಿಯಿಂದ ಆ ಗ್ರಾಮದಲ್ಲಿ ಹಾನಿಗೊಳಗಾದ 47 ಮನೆಗಳಿಗೆ ತಲಾ ಒಂದು ಸಾವಿರ ರೂ. ಪರಿಹಾರಧನ ವಿತರಿಸಲಾಯಿತು.
52 ಮನೆ ಮಂಜೂರು: ಸಂತ್ರಸ್ತರಿಗೆ ಪರಿಹಾರದ ಚೆಕ್‌ಗಳನ್ನು ಶಾಸಕ ವಿನಯಕುಮಾರ್ ಸೊರಕೆ ಹಿರಿಯಡ್ಕ ದಲ್ಲಿರುವ ಶಾಸಕರ ಕಚೇರಿಯಲ್ಲಿ ಹಸ್ತಾಂತರಿ ಸಿದರು. ಬಳಿಕ ಮಾತನಾಡಿದ ಅವರು, ಹಾನಿಗೊಳಗಾದ 52 ಕುಟುಂಬಗಳಿಗೆ ಬಸವ ವಸತಿ ಯೋಜನೆಯಡಿ ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಕುರಿತು ತಾಪಂ ಕಾರ್ಯನಿರ್ವಹಣಾಧಿಕಾರಿ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.
ಕೃಷಿ ಹಾನಿ ಕುರಿತು ತೋಟಗಾರಿಕಾ ಇಲಾಖೆಯಿಂದ ಸರ್ವೇ ನಡೆಸಲಾಗಿದ್ದು, ನಷ್ಟ ಪರಿಹಾರವನ್ನು ಒದಗಿಸ ಲಾಗುವುದು. ಈ ಕುರಿತು ವರದಿಯನ್ನು ಮುಖ್ಯ ಮಂತ್ರಿಗೆ ಸಲ್ಲಿಸಿ ಇನ್ನು ಹೆಚ್ಚಿನ ಪರಿಹಾರ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಚಂದ್ರಿಕಾ, ತಾಪಂ ಸದಸ್ಯ ಲಕ್ಷ್ಮೀನಾರಾ ಯಣ ಪ್ರಭು, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಆಚಾರ್ಯ, ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೆಸ್ವಾಮಿ, ಶಾಂತರಾಮ್ ಸೂಡ, ವಿನೋದ್ ಕುಮಾರ್ ಉಪಸ್ಥಿತರಿದ್ದರು. ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





