ಕಲಾಪೋಷಕರ ಸಹಕಾರದಿಂದಷ್ಟೇ ಜಾನಪದದ ಉಳಿವು: ಸಚಿವ ದೇಶಪಾಂಡೆ
ಬೇಕೂರಿನಲ್ಲಿ 12ನೆ ಜಾನಪದ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ
-BCK.gif)
ಕಾಸರಗೋಡು, ಜು.9: ನಮ್ಮ ಶ್ರೀಮಂತ ಸಂಸ್ಕೃತಿಯ ಹೆಗ್ಗುರುತಾದ ಜಾನಪದ ಕಲಾ ಪ್ರಕಾರಗಳಿಗೆ ಹಿಂದೆ ರಾಜಾಶ್ರಯ ಲಭ್ಯವಾಗುತ್ತಿದ್ದವು. ಪ್ರಸ್ತುತ ಸರಕಾರದ ಹೊರತಾಗಿ ಆರ್ಥಿಕ ಬಲವುಳ್ಳ ಕಲಾ ಪೋಷಕರು ಮತ್ತು ಸಹೃದಯಿ ಜನಸಾಮಾನ್ಯರ ನೆರವಿನಿಂದ ಮಾತ್ರ ಈ ಕಲಾ ಪ್ರಕಾರ ವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಭಾರೀ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಿ ಸಿದರು.
ಕರ್ನಾಟಕ ಜಾನಪದ ಪರಿಷತ್‌ನ ಕೇರಳ ಗಡಿನಾಡ ಘಟಕದ ವತಿಯಿಂದ ಬೇಕೂರು ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ 12ನೆ ಜಾನಪದ ಸಂಚಾರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುವ ಸಮೂಹಕ್ಕೆ ನಮ್ಮ ಕಲೆ, ಜಾನಪದಗಳನ್ನು ಕಲಿಸುವ, ಅರಿವು ಮೂಡಿಸುವ ಪ್ರಕ್ರಿಯೆ ಕ್ರಿಯಾತ್ಮಕವಾಗಿ ಆಗಬೇಕಿದ್ದು, ದಾಖಲೆಗಳಲ್ಲಿ ತೋರಿಸುವುದಕ್ಕಿಂತ ಪ್ರಾಯೋಗಿಕವಾಗಿ ಕಾರ್ಯರೂಪ ಕ್ಕಿಳಿಸುವುದು ಅತ್ಯುತ್ತಮ ಎಂದರು. ಕಜಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತ ರಿದ್ದ ಕರ್ನಾಟಕ ಜಾನಪದ ಅಕಾಡ ಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿದರು.
ಕಾಸರಗೋಡು ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಮಂಗಲ್ಪಾಡಿ ಗ್ರಾಪಂ ಸದಸ್ಯ ಉಮೇಶ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಉದಯ ಶಂಕರನ್, ಪ್ರಾಂಶುಪಾಲ ಚಂದ್ರಹಾಸ, ಮಂಗಳೂರು ಸಹ್ಯಾದ್ರಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ, ಕಜಾಪ ಮುಂಬೈ ಘಟಕಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಿಡಿ, ಸಮಾಜ ಸೇವಕ ಕಳತ್ತೂರು ವಿಶ್ವನಾಥ ಶೆಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯೆ ಆಯಿಷಾ ಪೆರ್ಲ, ಜಾನಪದ ಗಡಿನಾಡ ಘಟಕದ ಕಾರ್ಯದರ್ಶಿ ಲಕ್ಷ್ಮಣಪ್ರಭು, ಕೇಳು ಮಾಸ್ಟರ್ ಅಗಲ್ಪಾಡಿ, ಅಖಿಲೇಶ್ ಯಾದವ್ ಉಪಸ್ಥಿತರಿದ್ದರು,
ಕಜಾಪ ಕೇರಳ ಗಡಿನಾಡ ಘಟಕದ ಸಂಚಾಲಕ ಸಿ.ಕೆ.ವಸಂತಕುಮಾರ್ ಸ್ವಾಗತಿಸಿದರು. ಅಧ್ಯಾಪಕ ಸುರೇಶ್ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಗಡಿನಾಡ ಘಟಕದ ಜಾನಪದ ತಂಡದಿಂದ ವೈವಿಧ್ಯಮಯ ಜಾನಪದ ನೃತ್ಯ, ಹಾಡುಗಳ ಪ್ರಾತ್ಯ ಕ್ಷಿಕೆ, ಪ್ರದರ್ಶನ ಮತ್ತು ತೇಜಸ್ವಿನಿ ಕಡೆಂಕೋಡಿ ಪೈವಳಿಕೆ ಅವರಿಂದ ಜಾನಪದ ನೃತ್ಯದೊಡನೆ ಜಾದೂ ಪ್ರದರ್ಶನಗೊಂಡಿತು.





