ಬಿಷಪ್ ಡಾ.ಅಲೋಶಿಯಸ್‌ರಿಗೆ ಸನ್ಮಾನ

ಉಡುಪಿ, ಜು.9: ಧಾರ್ಮಿಕ ಗುರು ದೀಕ್ಷೆಯ 50ನೆ ವರ್ಷಾಚರಣೆ, ಧರ್ಮಾಧ್ಯಕ್ಷ ಹುದ್ದೆಯ 20 ವರ್ಷ ಹಾಗೂ ಜೀವನದ 75 ಸಂವತ್ಸರಗಳನ್ನು ಪೂರೈಸಿದ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಅಲೋಶಿಯಸ್ ಪೌಲ್ ಡಿಸೋಜರನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತದ ವತಿಯಿಂದ ಶನಿವಾರ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಸನ್ಮಾನಿಸಲಾಯಿತು.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಮಂಗಳೂರು ಬಿಷಪ್‌ರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಅಲೋಶಿಯಸ್ ಪೌಲ್ ಡಿಸೋಜ, ಮಂಗಳೂರು, ಉಡುಪಿ ಒಂದೇ ಧರ್ಮಪ್ರಾಂತ ವಾಗಿದ್ದ ವೇಳೆ 16 ವರ್ಷಗಳ ಕಾಲ ಈ ಭಾಗದ ಜನರ ಸೇವೆ ಮಾಡುವ ಅವಕಾಶ ಲಭಿಸಿದ್ದು, ಪ್ರಾಮಾಣಿಕ ಸೇವೆ ಸಲ್ಲಿಸಿದ ಆತ್ಮತೃಪ್ತಿ ತನಗಿದೆ ಎಂದರು.
ಕಾರ್ಯಕ್ರಮದ ಸಂಚಾಲಕ ಹಾಗೂ ಧರ್ಮ ಪ್ರಾಂತದ ಧರ್ಮಗುರುಗಳ ಸೆನೆಟ್ ಸಭೆಯ ಕಾರ್ಯದರ್ಶಿ ವಂ. ಡಾ.ಲಾರೆನ್ಸ್ ಡಿಸೋಜ ಸನ್ಮಾನ ಪತ್ರ ವಾಚಿಸಿದರು. ಸಭಾ ಕಾರ್ಯ ಕ್ರಮಕ್ಕೆ ಮೊದಲು ಧರ್ಮಾಧ್ಯಕ್ಷರು ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಕೃತಜ್ಞತಾ ಬಲಿಪೂಜೆ ಸಮರ್ಪಿ ಸಿದರು. ಕೆಥೆಡ್ರಲ್‌ನ ರೆಕ್ಟರ್ ವಂ.ಸ್ಟ್ಯಾನಿ ಬಿ. ಲೋಬೊ ಪ್ರಾರ್ಥನಾ ವಿಧಿವಿಧಾನಗಳನ್ನು ನೆರ ವೇರಿಸಿದರು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಟೋರ್ ಬ್ಯಾಪ್ಟಿಸ್ಟ್ ಮಿನೇಜಸ್ ಸ್ವಾಗತಿಸಿದರು. ಪಾಲನಾ ಸಮಿತಿಯ ಕಾರ್ಯ ದರ್ಶಿ ಆಲ್ಫೋನ್ಸ್ ಡಿಕೋಸ್ತ ವಂದಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.





