Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸ್ಮತಿ ನಕ್ಕ ಬೆನ್ನಲ್ಲೇ ಕಾದಿತ್ತು...

ಸ್ಮತಿ ನಕ್ಕ ಬೆನ್ನಲ್ಲೇ ಕಾದಿತ್ತು ಶಾಕ್...

ವಾರ್ತಾಭಾರತಿವಾರ್ತಾಭಾರತಿ10 July 2016 12:19 AM IST
share
ಸ್ಮತಿ ನಕ್ಕ ಬೆನ್ನಲ್ಲೇ ಕಾದಿತ್ತು ಶಾಕ್...

ಸ್ಮತಿ ನಕ್ಕ ಬೆನ್ನಲ್ಲೇ ಕಾದಿತ್ತು ಶಾಕ್...
 ಳೆದ ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ 19 ಸಚಿವರು ಪ್ರಮಾಣವಚನ ಸ್ವೀಕರಿಸಿದ ಬಳಿಕ, ಸ್ಮತಿ ಸಂಪುಟ ಸಹೊದ್ಯೋಗಿಗಳ ಜೊತೆ ಮಾತನಾಡುತ್ತಾ ಪ್ರಕಾಶ್ ಜಾವ್ಡೇಕರ್ ಆನಂತರ ಮೇನಕಾ ಗಾಂಧಿ ಪರಿಸರ ಸಚಿವಾಲಯಕ್ಕೆ ವರ್ಗಾವಣೆಯಾಗಲಿದ್ದಾರೆಯೇ ಎಂದು ನಗುತ್ತಾ ಕೇಳಿದರಂತೆ. ಯಾಕೆಂದರೆ ಸಂಪುಟ ವಿಸ್ತರಣೆಯ ವೇಳೆ ಪರಿಸರ ಹಾಗೂ ಅರಣ್ಯ ಖಾತೆಯ ಸಹಾಯಕ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರ್ ಕ್ಯಾಬಿನೆಟ್ ದರ್ಜೆಗೆ ಭಡ್ತಿಗೊಂಡಿದ್ದರು. ಆದರೆ ಆಗ ಮಾನವಸಂಪನ್ಮೂಲ ಸಚಿವೆಯಾಗಿದ್ದ ಸ್ಮತಿಗೆ, ಜಾವ್ಡೇಕರ್ ಅವರಿಗಾಗಿ ಖಾತೆಯನ್ನು ಬಿಟ್ಟುಕೊಡಬೇಕಾಗಿರುವುದು ತಾನೇ ಹೊರತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಮೇನಕಾ ಅಲ್ಲವೆಂಬ ಬಗ್ಗೆ ಒಂದಿಷ್ಟು ಸುಳಿವು ಕೂಡಾ ಸಿಕ್ಕಿರಲಿಲ್ಲ. ಅವರಷ್ಟೇ ಅಲ್ಲ ಮೋದಿ ಹಾಗೂ ಶಾರನ್ನು ಬಿಟ್ಟರೆ ಇನ್ನಾರಿಗೂ ಈ ವಿಷಯ ತಿಳಿದೇ ಇರಲಿಲ್ಲ. ಜಾವ್ಡೇಕರ್ ಹಾಗೂ ಸ್ಮತಿ ಇರಾನಿಯವರಿಗೆ ಅವರ ನೂತನ ಸಚಿವ ಖಾತೆಗಳ ಬಗ್ಗೆ ಸಂಪುಟ ಕಾರ್ಯದರ್ಶಿ ಅಂದು ರಾತ್ರಿಯ ವೇಳೆಗಷ್ಟೇ ಮಾಹಿತಿ ನೀಡಿದ್ದರು. ಇದನ್ನು ಕೇಳಿ ಇರಾನಿಗೆ ಶಾಕ್ ಆಗಿಬಿಟ್ಟಿತ್ತು. ಸುಮಾರು ಕೆಲವು ತಾಸುಗಳವರೆಗೆ ಸ್ಮತಿ ತನ್ನ ನೂತನ ಖಾತೆಯ ಬಗ್ಗೆ ಏನನ್ನೂ ಟ್ವೀಟ್ ಮಾಡದಿದ್ದುದು ಇದರಿಂದ ಸ್ಪಷ್ಟವಾಗುತ್ತದೆ. ಸ್ಮತಿ ಇರಾನಿ ಮೋದಿಗೆ ನಿಕಟರಾಗಿರುವುದರಿಂದ ಸಂಪುಟ ವಿಸ್ತರಣೆ ಅವರನ್ನು ಬಾಧಿಸದು ಎಂದು ಹೊಸದಿಲ್ಲಿಯ ಪತ್ರಕರ್ತರು ಭಾವಿಸಿದಿದ್ದರೆ, ಖಂಡಿತವಾಗಿಯೂ ಅದು ಅವರದೇ ತಪ್ಪು ಎನ್ನಬಹುದು.

ಗರಿಷ್ಠ ಲಾಭ ಪಡೆದವರು
   ಈ ಸಂಪುಟ ಪುನಾರಚನೆಯಲ್ಲಿ ಜಾಕ್‌ಪಾಟ್ ಹೊಡೆದವರೆಂದರೆ ಪ್ರಕಾಶ್ ಜಾವ್ಡೇಕರ್. ತಾನು ಕ್ಯಾಬಿನೆಟ್ ದರ್ಜೆಯ ಸಚಿವನಾಗಿ ಭಡ್ತಿ ಪಡೆಯಲಿದ್ದೇನೆಂಬ ಬಗ್ಗೆ ಅವರಿಗೆ ಒಂದಿಷ್ಟು ಸುಳಿವೇ ದೊರೆತಿರಲಿಲ್ಲ. ಶನಿವಾರದಂದು ಜಾವ್ಡೇಕರ್‌ಗೆ ಮೋದಿ ಕರೆ ಮಾಡಿ, ಯಾವಾಗ ದಿಲ್ಲಿಗೆ ವಾಪಸಾಗುತ್ತೀರೆಂದು ವಿಚಾರಿಸಿದಾಗ, ಅವರು ನಿಜಕ್ಕೂ ತಬ್ಬಿಬ್ಬಾಗಿದ್ದರು. ಆಗ ಜರ್ಮನಿಯ ಬರ್ಲಿನ್‌ನಲ್ಲಿದ್ದ ಜಾವ್ಡೇಕರ್, ತಾನು ಮುಂದಿನ ವಾರ ವಾಪಸಾಗುವುದಾಗಿ ತಿಳಿಸಿದ್ದರು. ಆಗ ಅವರಿಗೆ ಮೋದಿ, ಪ್ರವಾಸವನ್ನು ಮೊಟಕುಗೊಳಿಸಿ, ಕೂಡಲೇ ವಿಮಾನ ಹಿಡಿದು ದಿಲ್ಲಿಗೆ ಮರಳುವಂತೆ ಸೂಚಿಸಿದರು. ಹಾಗಾದರೆ ಮಾತ್ರ ಅವರು ಸೋಮವಾರ ಅಥವಾ ಮಂಗಳವಾರ ಬೆಳಗ್ಗಿನೊಳಗೆ ದಿಲ್ಲಿ ತಲುಪಲು ಸಾಧ್ಯವಿತ್ತು. ಆದರೆ ಎಲ್ಲರಂತೆ ಸಂಪುಟ ವಿಸ್ತರಣೆಯಾಗಲಿದೆಯೆಂದು ಮಾತ್ರ ತಿಳಿದಿದ್ದ ಜಾವ್ಡೇಕರ್, ತನಗೆ ಸಂಪುಟದಲ್ಲಿ ಭಡ್ತಿ ದೊರೆಯಲಿದೆಯೆಂಬ ಬಗ್ಗೆ ಸುಳಿವೇ ಇರಲಿಲ್ಲ. ಕೊಂಚ ನರ್ವಸ್ ಕೂಡಾ ಆಗಿದ್ದ ಅವರು ಮಂಗಳವಾರ ಮುಂಜಾನೆ ದಿಲ್ಲಿ ವಿಮಾನನಿಲ್ದಾಣದಲ್ಲಿ ಬಂದಿಳಿದರು. ಸಂಪುಟದಲ್ಲಿ ತನಗೆ ಭಡ್ತಿ ದೊರೆಯುವುದೆಂಬ ವಿಷಯ ಕೇಳಿದಾಗಲೂ, ತಾನು ಪರಿಸರ ಹಾಗೂ ಅರಣ್ಯ ಖಾತೆಯಲ್ಲಿಯೇ ಮುಂದುವರಿಯಲಿದ್ದೇನೆಯೇ ಎಂಬುದು ಸಹ ಅರಿವಿರಲಿಲ್ಲ. ಆದರೆ ತಾನು ನೂತನ ಮಾನವಸಂಪನ್ಮೂಲ ಸಚಿವನಾಗಲಿದ್ದೇನೆಂದು ತಿಳಿದಾಗ ಅವರಿಗೆ ಮೋದಿ ಹಾಗೂ ಶಾ ತನಗೆ ಸಂಪುಟದಲ್ಲಿ ಮಹತ್ವದ ಸ್ಥಾನ ನೀಡಿದ್ದಾರೆಂಬುದು ಮನದಟ್ಟಾಯಿತು. ಕಟ್ಟಾ ಆರೆಸ್ಸಿಸಗನೆಂದೇ ಪರಿಗಣಿಸಲ್ಪಟ್ಟಿರುವ ಜಾವ್ಡೇಕರ್ ವಿನಯಶೀಲತೆಯಿಂದಲೂ ಹೆಸರಾಗಿದ್ದಾರೆ. ಅದರೆ ಅವರು ಸ್ಮತಿ ಇರಾನಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲಿದ್ದಾರೆಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ.

ಶುಭಗಳಿಗೆಗಾಗಿ ಕಾದು ನಿಂತ ಬೀರೇಂದ್ರ ಸಿಂಗ್
 ಕೆಲವು ಸಚಿವರು ಬುಧವಾರದಂದು ಶುಭ ಮುಹೂರ್ತದ ಹುಡುಕಾಟದಲ್ಲಿದ್ದರು. ಹೆಚ್ಚೇನೂ ಕೆಲಸ ಮಾಡಿಲ್ಲವೆಂಬ ಟೀಕೆಗಳನ್ನು ಎದುರಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದ್ರ ಸಿಂಗ್‌ರನ್ನು ಸಂಪುಟ ಪುನಾರಚನೆಯ ವೇಳೆ ಉಕ್ಕು ಖಾತೆಗೆ ವರ್ಗಾಯಿಸಲಾಗಿತ್ತು. ಆದರೆ ಹಳೆಯ ಚಾಳಿಗಳು ಸುಲಭದಲ್ಲಿ ಹೋಗುವುದು ಕಷ್ಟ. ಈ ಸಲವೂ ಅವರು ಶುಭಮುಹೂರ್ತದಲ್ಲಿಯೇ ಹೊಸ ಖಾತೆಯನ್ನು ವಹಿಸಿಕೊಳ್ಳಲು ಬಯಸಿದ್ದರು. ಹೀಗಾಗಿ ಅವರು, ಕೃಷಿ ಭವನದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆಯನ್ನು ನರೇಂದ್ರ ತೋಮಾರ್ ಅವರಿಗೆ ಹಸ್ತಾಂತರಿಸಿ, ಸಂಜೆ ನಾಲ್ಕು ಗಂಟೆಗೆ ಉದ್ಯೋಗಭವನದಲ್ಲಿರುವ ಕೃಷಿ ಸಚಿವಾಯಲಯಕ್ಕೆ ಧಾವಿಸಿದ್ದರು. ಯಾಕೆಂದರೆ ನೂತನ ಖಾತೆಯಲ್ಲಿ ಅಧಿಕಾರವಹಿಸಿಕೊಳ್ಳಲು ಅದು ಪ್ರಶಸ್ತ ಸಮಯವಾಗಿತ್ತು. ಆ ವೇಳೆ ಅವರು ತನ್ನ ಹಳೆಯ ಖಾತೆಯ ಬಗ್ಗೆ ಪತ್ರಕರ್ತರೊಂದಿಗೆ ಸ್ವಲ್ಪ ಕೂಡಾ ಮಾತನಾಡಲಿಲ್ಲ. ಪ್ರಾಯಶಃ ಹಾಗೆ ಮಾತನಾಡುವುದು ಅಶುಭವೆಂದು ಅವರು ಭಾವಿಸಿರಬಹುದು. ಮೂಢನಂಬಿಕೆಗಳನ್ನು ಈ ರೀತಿ ನಿಷ್ಠೆಯಿಂದ ಪಾಲಿಸುವುದರಿಂದ ಉಕ್ಕು ಸಚಿವಾಲಯದಲ್ಲಿ ಅವರ ಕಾರ್ಯನಿರ್ವಹಣೆಯು ಸುಧಾರಣೆಗೊಳ್ಳಲಿದೆಯೇ?. ಅದನ್ನು ಕಾಲವಷ್ಟೇ ಹೇಳಬಹುದಾಗಿದೆ.

ಮೀಸಾ ಭಾರ್ತಿ ಗರಂ
ಲಾಲು ಪ್ರಸಾದ್‌ರ ಪುತ್ರಿ ಮೀಸಾ ಭಾರ್ತಿ ಬಂಡಾಯವೇಳುವ ಸನ್ನಾಹದಲ್ಲಿದ್ದಾರೆ. ಯಾಕೆ ಗೊತ್ತೆ?.ಸಹೋದರರಂತಲ್ಲದೆ, ಮೀಸಾಳ ರಾಜಕೀಯ ಬದುಕು ಕೆಳಮುಖವಾಗಿ ಸಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಸೋಲನುಭವಿಸಿದ್ದ ಆಕೆಯ ವಿರುದ್ಧ ಉದ್ಧಟತನದ ವರ್ತನೆಯ ಆರೋಪವೂ ಇದೆ. ಪಕ್ಷದ ಪದಾಧಿಕಾರಿಗಳಿಂದ ಹಾಗೂ ಕಾರ್ಯಕರ್ತರಿಂದಲೂ ಆಕೆ ತೀವ್ರ ವಿರೋಧವನ್ನು ಎದುರಿಸುತ್ತಿದ್ದಾಳೆಂಬ ಪಿಸುಮಾತುಗಳೂ ಕೇಳಿಬರುತ್ತಿವೆ. ತನಗೆ ತೊಂದರೆಗಳು ಎದುರಾಗಿರುವುದನ್ನು ಗ್ರಹಿಸಿರುವ ಆಕೆ ಜಮ್ಶೆದ್‌ಪುರವನ್ನು ತೊರೆಯುವ ತರಾತುರಿಯಲ್ಲಿದ್ದಾಳೆಂಬ ವದಂತಿಗಳು ದಟ್ಟವಾಗಿ ಕೇಳಿಬರುತ್ತಿವೆ. ತನಗೆ ಸೂಕ್ತ ಸ್ಥಾನಮಾನ ನೀಡದೆ ಇದ್ದಲ್ಲಿ, ಕುಟುಂಬದ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸುವುದಾಗಿ ಆಕೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಆದರೆ ರಾಬ್ರಿ ದೇವಿಯವರ ಮಧ್ಯಪ್ರವೇಶದಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದ್ದು, ಸದ್ಯಕ್ಕೆ ಪರಿಸ್ಥಿತಿ ಒಂದಿಷ್ಟು ತಿಳಿಗೊಂಡಿರುವ ಹಾಗೆ ಕಾಣುತ್ತಿದೆ.

ಕಮಲ್‌ನಾಥ್‌ಗೆ
ಹೊಸ ಸಮಸ್ಯೆ

  ಕಾಂಗ್ರೆಸ್ ಕೇಂದ್ರದಲ್ಲಿ ಹಾಗೂ ಹಲವು ಪ್ರಮುಖ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇಲ್ಲದೆ ಇರಬಹುದು ಆದರೆ, 24 ಅಕ್ಬರ್ ರಸ್ತೆಯಲ್ಲಿ ಜನಜಂಗುಳಿ ಕಡಿಮೆಯಾಗುತ್ತಿರುವ ಬಗ್ಗೆ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ. ಯಾಕೆಂದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಪದಚ್ಯುತಿಗಿಂತ ಹೆಚ್ಚಾಗಿ ನೇಮಕಾತಿ ನಡೆಯುತ್ತಿದೆ. ಯಾವುದೇ ಪ್ರಧಾನ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಕೇಳಿಕೊಳ್ಳದ ಕಾರಣ, ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಕೊಠಡಿಗಳ ತೀವ್ರ ಕೊರತೆಯುಂಟಾಗಿದೆ. ಹೀಗಾಗಿ ಒಂದು ಕಾಲದಲ್ಲಿ ಯೂರಿನಲ್ ಆಗಿ ಬಳಕೆಯಾಗುತ್ತಿದ್ದ ಕೋಣೆಯೊಂದನ್ನು ಕಮಲ್‌ನಾಥ್‌ಗೆ ನೀಡಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ವಿವಾದಕ್ಕೆ ಸಿಲುಕಿದ್ದ ಕಮಲ್‌ನಾಥ್, ಎಎಪಿ ಹಾಗೂ ಇತರ ಪಕ್ಷಗಳ ಪ್ರತಿಭಟನೆಗೆ ಮಣಿದು ರಾಜೀನಾಮೆ ನೀಡಿದ್ದ ಕಮಲ್‌ನಾಥ್, ತನ್ನ ನೂತನ ಕೊಠಡಿಯ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದಾರಂತೆ. ಪ್ರತಿಷ್ಠೆ ಹಾಗೂ ಅಂತಸ್ತಿಗೆ ಅತಿಯಾದ ಮಹತ್ವ ನೀಡುವ ಕಮಲ್‌ನಾಥ್, ಒಂದು ಕಾಲದಲ್ಲಿ ಯೂರಿನಲ್ ಆಗಿದ್ದ ಕೊಠಡಿಯಲ್ಲಿ ಕುಳಿತುಕೊಳ್ಳಲು ಬಯಸುತ್ತಿಲ್ಲ ಮತ್ತು ಅವರೀಗ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X