ಪೂಂಜಾಲಕಟ್ಟೆ : ಅಸೌಖ್ಯದಿಂದ ವಲಸೆ ಕಾರ್ಮಿಕ ಸಾವು
ವಿಟ್ಲ, ಜು.10: ವಲಸೆ ಕಾರ್ಮಿಕನೋರ್ವ ಅಸೌಖ್ಯದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಬರಬೈಲು-ಬಲ್ಲಾಳ್ ಎಸ್ಟೇಟ್ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತ ಕಾರ್ಮಿಕನನ್ನು ಬಿಹಾರ ಮೂಲದ ಹಗ್ಲಿಯಾರ್ ನಿವಾಸಿ ಫರ್ಮನ್ ಶರ್ಮಾ (30) ಎಂದು ಹೆಸರಿಸಲಾಗಿದೆ.
ಈತ ಬುಧವಾರ ರಾತ್ರಿ ಎಂದಿನಂತೆ ಇಲ್ಲಿನ ತೋಟದ ಮನೆಯಲ್ಲಿ ಕೆಲಸ ಮುಗಿಸಿ ಮಲಗಿದ್ದರು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಇತರ ಕಾರ್ಮಿಕರು ಬಂದು ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
Next Story





