ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿದ ವಿವಾಹಿತ
ಮುಂಡಗೋಡ, ಜು.10: ವಿವಾಹಿತನೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿ ನಾಪತ್ತೆಯಾದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ತಮ್ಯಾನಕೊಪ್ಪ ಗ್ರಾಮದ ರಾಜಕುಮಾರ ಪವಾರ ಎಂಬಾತನೆ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈತ ಮುಂಡಗೋಡ ನಗರದ 28 ವರ್ಷದ ಯವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅವಳೊಂದಿಗೆ ಲೈಂಗಿಕ ಸಂಪರ್ಕ ಬೆಳಸಿ ಗರ್ಭಾವತಿಯನ್ನಾಗಿರಿಸಿದ್ದಾನೆನ್ನಲಾಗಿದೆ.
ಯುವತಿಯು ಆಸ್ಪತ್ರೆಗೆ ಹೋದಾಗ ಗರ್ಭ ಧರಿಸಿರುವುದು ಧೃಡಪಟ್ಟಿದ್ದು, ಈ ಬಗ್ಗೆ ಆತನಲ್ಲಿ ಹೇಳಿದ್ದಾಳೆ. ಮದುವೆ ಮಾಡಿಕೊಳ್ಳುತ್ತೇನೆ ನೀನು ಮನೆಯಿಂದ ಬಾ ಎಂದು ಆತ ಹೇಳಿದ್ದು, ಯುವತಿಯು ಮನೆಯಿಂದ ಬಂದಾಗ ಯುವತಿಯನ್ನು ಬಸ್ ನಲ್ಲಿ ಕುಳ್ಳಿರಿಸಿ ಆತನಾಪತ್ತೆಯಾಗಿದ್ದಾನೆ. ಆತನನ್ನು ಹುಡುಕಿಕೊಂಡು ಮನೆಗೆ ಹೋದಾಗ ಆತನಿಗೆ ಹೆಂಡತಿ ಹಾಗೂ ಮೂರು ಮಕ್ಕಳು ಇರುವುದು ತಿಳಿದು ಬಂದಿದೆ.
ಮದುವೆಯಾಗಿದ್ದರೂ ಸಹ ನನಗೆ ಸುಳ್ಳು ಹೇಳಿ ನಂಬಿಸಿ ಗರ್ಭವತಿಯನ್ನಾಗಿಸಿ ಪರಾರಿಯಾದ ರಾಜಕುಮಾರ ಎಂಬಾತನ ಮೇಲೆ ಯುವತಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪಿಸೈ ಲಕ್ಕಪ್ಪ ನಾಯಕ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





