ಮಂಗಳೂರು:14ನೇ ಇಂಟರ್‌ನ್ಯಾಷನಲ್ ಸಿಝಡ್ ಜಾವಾ ಎಸ್‌ಡಿ ದಿನಾಚರಣೆ

ಮಂಗಳೂರು,ಜು.10: ಮಂಗಳೂರು ಜಾವಾ ಎಸ್‌ಡಿ ಮೋಟಾರ್‌ಸೈಕಲ್ ಕ್ಲಬ್‌ನ ವತಿಯಿಂದ 14ನೇ ಇಂಟರ್‌ನ್ಯಾಷನಲ್ ಸಿಝಡ್ ಜಾವಾ ಎಸ್‌ಡಿ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ನಗರದ ಕಾರ್‌ಸ್ಟ್ರೀಟ್‌ನ ಬಿಇಎಂ ಹೈಸ್ಕೂಲ್ ಮೈದಾನದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 48 ಎಸ್‌ಡಿ ಮತ್ತು ಜಾವಾ ಬೈಕ್ ಸವಾರರು ಭಾಗವಹಿಸಿದ್ದರು. 1960ರಿಂದ 1996 ವಿವಿಧ ಮಾದರಿಯ ಬೈಕ್‌ಗಳ ಪ್ರದರ್ಶನ ಈ ಸಂದರ್ಭದಲ್ಲಿ ನಡೆಯಿತು.
ಪ್ರದರ್ಶನದಲ್ಲಿ 1960ರ ಕುಂದಾಪುರದ ಅನಂತ್ ಕಾಮತ್ ಅವರ ಸಿಝಡ್ ಬೈಕ್ ಅತ್ಯಂತ ಹಳೆಯ ಮಾದರಿಯ ಬೈಕ್ ಆಗಿ ಗಮನಸೆಳೆಯಿತು.
ಈ ಸಂದರ್ಭದಲ್ಲಿ ಜಾವಾ ಎಸ್‌ಡಿ ಬೈಕ್‌ಗಳ ರಿಪೇರಿ ಮಾಡುವ ಮೆಕ್ಯಾನಿಕಲ್‌ಗಳಾದ ನಿತಿನ್ ಆಚಾರಿ, ಶ್ರೀಪತಿ, ಜನ್ನ, ಹೆನ್ರಿ ಡಿಸೋಜ, ಜ್ಯೋತಿ, ಡೊನಾಲ್ಡ್ ಡಿಸೋಜ ಅವರನ್ನು ಗೌರವಿಸಲಾಯಿತು.
ದಿನಾಚರಣೆಯ ಅಂಗವಾಗಿ ನಿಧಾನಗತಿ ಬೈಕ್ ಚಾಲನೆ, ಚಮಚದಲ್ಲಿ ಲಿಂಬೆ ಹಣ್ಣು ಇಟ್ಟು ಬೈಕ್ ಚಾಲನೆ ವೇಗಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
Next Story





