ಮೂಡುಬಿದಿರೆ: ಕರಿಂಜೆ ಉಪ ಚುನಾವಣೆ ಶೇ 71.7 ಮತದಾನ.

ಮೂಡುಬಿದಿರೆ,ಜು.10: ಇಲ್ಲಿನ ಪುರಸಭೆಯ ವಾರ್ಡ್ ನಂ21 ಕರಿಂಜೆ ವಾರ್ಡ್‌ಗೆ ರವಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 71.7 ಮತದಾನವಾಗಿದೆ. ವಾರ್ಡಿನ ಒಟ್ಟು 675 ಪುರುಷ ಮತದಾರರ ಪೈಕಿ 473 ಮಂದಿ, 1419 ಮಹಿಳೆಯರ ಪೈಕಿ 544 ಒಟ್ಟು 1419 ಮತದಾರರ ಪೈಕಿ 1017 ಮಂದಿ ಮತಚಲಾಯಿಸಿದ್ದಾರೆ. ಫಲಿತಾಂಶ ಜುಲೈ 13ರಂದು ಬುಧವಾರ ಘೋಷಣೆಯಾಗಲಿದೆ.
ಕಳೆದ ಬಾರಿ ಕಾಂಗ್ರೆಸ್‌ನ ಅನಿಲ್ ಲೋಬೋರವರ ಕೈ ಜಾರಿದ್ದ ಈ ಸ್ಥಾನಕ್ಕೆ ಕಾಂಗ್ರೆಸ್ಸಿನ ವಿನೋದ್ ಪಿರೇರಾ ಹಾಗೂ ಬಿಜೆಪಿಯ ಯಶವಂತ ಶೆಟ್ಟಿಯವರ ಮಧ್ಯೆ ಇಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಪುರಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ಸಿಗೆ ಈ ವಾರ್ಡ್ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ನಡುವೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎದುರಾಳಿ ಅನಿಲ್ ಲೋಬೋ ಗೆದ್ದರೂ ಲೋಬೋ ಸ್ಪರ್ಧೆಗೆ ಅರ್ಹರಾಗಿರಲಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಕೃಷ್ಣರಾಜ ಹೆಗ್ಡೆ ಈ ಬಾರಿ ಬಿಜೆಪಿಯಿಂದ ಸ್ಪರ್ಧೆಗೆ ಆತುರರಾಗಿದ್ದರೂ ಅವರ ಅರ್ಹತೆ ಬಗ್ಗೆ ಅಡ್ಡಿಗಳು ಎದುರಾಗಿದ್ದವು. ಹಾಗಾಗಿ ಅದರ ಬಗ್ಗೆ ಕಾನೂನು ಹೋರಾಟ ಮುಂದುವರೆಸುವ ಬಗ್ಗೆ ಕೃಷ್ಣರಾಜ ಹೆಗ್ಡೆ ಮತ್ತೆ ಆಸ್ತಕ್ತಿಯಲ್ಲಿದ್ದಾರೆ. ಈ ನಡುವೆ ಬಿಜೆಪಿ ಇಲ್ಲಿ ಗೆಲುವಿನ ಲಾಭದ ಕನಸು ಕಾಣುತ್ತಿದೆ.





