‘ಆತ್ಮರಕ್ಷಣೆ ಭಾಗವಾಗಿ ಪ್ರತಿಯೊಬ್ಬರೂ ಕರಾಟೆ ಕಲಿಯಬೇಕು’
ದಾವಣಗೆರೆ: ರಾಜ್ಯಮಟ್ಟದ ಕರಾಟೆ ಸ್ಪರ್ಧೆ
ದಾವಣಗೆರೆ, ಜು.10: ಕರಾಟೆಯನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ ನಮ್ಮ ಆತ್ಮರಕ್ಷಣೆಯ ಭಾಗವಾಗಿ ಪ್ರತಿಯೊಬ್ಬರೂ ಕರಾಟೆ ಕಲಿಯಬೇಕು ಎಂದು ಲಯನ್ಸ್ ಕ್ಲಬ್‌ನ ಉಪಜಿಲ್ಲಾ ಗವರ್ನರ್ ಎ.ಆರ್. ಉಜ್ಜನಪ್ಪ ಹೇಳಿದ್ದಾರೆ. ನಗರದ ಲಯನ್ಸ್ ಭವನದಲ್ಲಿ ರವಿವಾರ ಲಯನ್ಸ್, ಲಯನೆಸ್, ಲಿಯೋ ಕ್ಲಬ್ಸ್ ಮತ್ತು ಸ್ಟೂಡೆಂಟ್ ಓಲಿಂಪಿಕ್ ಅಸೋಸಿಯೇಶನ್ ಆಫ್ ಕರ್ನಾಟಕದಿಂದ ಬಾಲಕ, ಬಾಲಕಿಯರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಕರಾಟೆ ಒಂದು ಆತ್ಮರಕ್ಷಣೆಯ ಕಲೆಯಾಗಿದ್ದು, ಇದು ಜಪಾನ್ ದೇಶದ ಕ್ರೀಡೆಯಾಗಿದ್ದರೂ ಕಳೆದ 15 ವರ್ಷಗಳಿಂದ ನಿರಂತರವಾಗಿ ಈ ಕ್ರೀಡೆಯನ್ನು ಭಾರತದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಕ್ರೀಡೆಯಲ್ಲಿ ಕೇವಲ ಶಕ್ತಿ ಇದ್ದರೆ ಸಾಲದು ಯುಕ್ತಿ ಮತ್ತು ಜಾಣ್ಮೆಯ ಪ್ರದರ್ಶನ ನೀಡುವುದು ಅತೀಮುಖ್ಯವಾಗಿದೆ ಎಂದರು.
ಕ್ರೀಡಾಪಟುಗಳು ಉತ್ತಮ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕರಾಟೆ ಪ್ರಚಲಿತಕ್ಕೆ ಬಂದು ಎಲ್ಲರೂ ಕಲಿಯುವಂತಾಗಲಿ ಎಂದು ಆಶಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಜಿ.ನಾಗನೂರು ಮಾತನಾಡಿ, ಕರಾಟೆ ಸ್ಪರ್ಧೆಯು ಈವರೆಗೂ ಒಲಿಂಪಿಕ್‌ಗೆ ಆಯ್ಕೆಯಾಗಿಲ್ಲ ಎಂಬುದು ಬೇಸರದ ಸಂಗತಿ. ಆದರೆ 2020ರ ವೇಳೆಗೆ ಒಲಿಂಪಿಕ್ ಆಯ್ಕೆಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರ್ಯಗಳು ನಡೆಯುತ್ತಿದೆ ಎಂದು ಹೇಳಿದರು.
ಕರಾಟೆಯನ್ನೂ ಈ ಹಿಂದೆ ಬ್ರೂಸ್ಲಿ ಸಿನೆಮಾ ಮೂಲಕ ನೋಡಲಾಗುತ್ತಿತ್ತು. ಆದರೆ ಕಾಲ ಬದಲಾಗಿದೆ. ಈ ಆಧುನಿಕ ಯುಗದಲ್ಲಿ ಮಹಿಳೆಯರು ಕರಾಟೆಯನ್ನು ಕಲಿತು ನಿರ್ಭೀತಿಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆೆ ಎಂದು ತಿಳಿಸಿದರು. ರಾಜ
್ಯ ಮಟ್ಟದ ಕರಾಟೆ ಸ್ಪರ್ಧೆಗೆ ನಾಲ್ಕು ಜಿಲ್ಲೆಗಳಾದ ಹಾಸನ, ಹಾವೇರಿ, ದಾವಣಗೆರೆ, ಮೈಸೂರಿ ನಿಂದ ಸುಮಾರು 120 ಕರಾಟೆ ಪಟುಗಳು ಆಗಮಿಸಿದ್ದು, ಕರಾಟೆ ಸ್ಪರ್ಧೆ ಮೂಲಕ ಆಯ್ಕೆಯನ್ನು ನಡೆಸಿ ನಂತರ ಹರಿದ್ವಾರ ಉತ್ತರಾಖಂಡದಲ್ಲಿ ಜು.22ರಿಂದ 25ರವರೆಗೆ ನ್ಯಾಷನಲ್ ಕರಾಟೆ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಬೆಳ್ಳೂಡಿ ಶಿವಕುಮಾರ್, ಕೆ.ಪಿ. ಜೋಸ್, ಶ್ರೀಧ್ ಮೂರ್ತಿ, ದೇವಗಿರಿ ಪ್ರಭಾಕರ್, ಬಿ.ಎಸ್. ಶಿವಾನಂದ, ಅಕಾಶ್ ಮತ್ತಿತರರು ಉಪಸ್ಥಿತರಿದ್ದರು.







