‘ತಾಳೆ ಬೆಳೆಗೆ ಬೆಂಬಲ ಬೆಲೆ ನೀಡಲು ಅಗತ್ಯ ಕ್ರಮ’
ದಾವಣಗೆರೆ: ಜನ ಸಂಪರ್ಕ ಸಭೆ
ದಾವಣಗೆರೆ, ಜು.10: ತೋಟಗಾರಿಕೆ ಬೆಳೆಗಳಲ್ಲೊಂದಾದ ತಾಳೆ ಬೆಳೆಗೆ ಶೀಘ್ರವೇ ಬೆಂಬಲ ಬೆಲೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಾಳೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ತಮ್ಮ ಗೃಹ ಕಚೇರಿಯಲ್ಲಿ ರವಿವಾರ ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ತಾಳೆ ಬೆಳೆಗಾ ರರ ಒಕ್ಕೂಟ ಹಾಗೂ ಹೊನ್ನಾಳಿ ತಾಲೂಕು ತಾಳೆ ಬೆಳೆಗಾರರ ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಮಾತನಾಡಿದ ಅವರು, ತಾಳೆ ಬೆಳೆಗೆ ಉತ್ತಮ ಬೆಲೆ ನಿಗದಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ತಾಳೆ ಬೆಳೆಗಾರರ ಮುಖಂಡರು ಮಾತನಾಡಿ, ರಾಜ್ಯದಲ್ಲೇ ಹೆಚ್ಚು ತಾಳೆಯನ್ನು ದಾವಣಗೆರೆ ಜಿಲ್ಲೆ ಯಲ್ಲಿ ಬೆಳೆಯಲಾಗುತ್ತಿದ್ದು, ಈ ಸಾಲಿನಲ್ಲಿ 2,500 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ. ಸರಕಾರ ಈ ಹಿಂದೆ ಎಪ್ರಿಲ್ ತಿಂಗಳಿನಲ್ಲೇ ಬೆಂಬಲ ಬೆಲೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಇದುವರೆಗೂ ಬೆಂಬಲ ನೀಡದೆ ಇರುವ ಕಾರಣ ತಾಳೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ನಮಗೆ ಉತ್ತಮ ಬೆಲೆ ಕೊಡಿಸಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಗಳು ಬೀದಿಗೆ ಬರಲಿವೆ ಎಂದು ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡರು.
ತಾೆ ಬೆಳೆಗಾರರ ಸಂಘದ ಪದಾಧಿಕಾರಿಗಳ ಸಮಸ್ಯೆ ಆಲಿಸಿದ ಸಚಿವರು, ರೈತರ ಹಿತ ಕಾಪಾಡುವಲ್ಲಿ ನಾವು ಸದಾ ಸಿದ್ಧ. ಯಾವುದೇ ಕಾರಣಕ್ಕೂ ರೈತಾಪಿ ವರ್ಗ ಬೇಸರ ಪಟ್ಟುಕೊಳ್ಳಬಾರದು. ಶೀಘ್ರವೇ ಎಲ್ಲಾ ರೈತರ ಸಮಸ್ಯೆಗಳಿಗೆ ನಮ್ಮ ಸರಕಾರ ಪರಿಹಾರ ಕಲ್ಪಿಸುತ್ತದೆ. ತಾಳೆ ಸೇರಿ ದಂತೆ ಎಲ್ಲಾ ಬೆಳೆಗಳಿಗೂ ಬೆಂಬಲ ನೀಡುವ ಕುರಿತು ಮುಖಂಡರೊಡನೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಸಚಿವರು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳ
ಲ್ಲೇ ಪರಿಹಾರ ಸೂಚಿಸಿ, ಉಳಿದ ಕೆಲವು ರೈತರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸೂಚಿಸುವುದಾಗಿ ಅವರು ಭರವಸೆ ನೀಡಿದರು. ತಾಳೆ ಬೆಳೆ ರೈತರ ನಿಯೋಗದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ತಾಳೆ ಬೆಳೆಗಾರರ ಒಕ್ಕೂಟ ಹಾಗೂ ಹೊನ್ನಾಳಿ ತಾಲೂಕು ತಾಳೆ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಕೆ.ಇ. ನಾಗರಾಜ, ಗೋಪಾಲಕೃಷ್ಣ ಉಡುಪ, ನರಸಿಂಹ ಮೂರ್ತಿ, ರಮೇಶ್, ಪರಮೇಶ್ವರಪ್ಪ, ರತ್ನಾಕರಗೌಡ್ರು, ಎ.ಇ. ಮಲ್ಲಿಕಾರ್ಜುನ್, ಸತೀಶ್ ಭಾರ್ಗವ್, ಸೋಮಶೇಖರ್ ಮತ್ತಿತರರಿದ್ದರು.
ತಂಬಾಕು







