ಸೇವನೆ ಕುರಿತು ಜಾಗೃತಿ ಮೂಡಿಸಿ: ಅಪರ ಜಿಲ್ಲಾಧಿಕಾರಿ
ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಪರಿಶೀಲನಾ ಸಭೆ
ದಾವಣಗೆರೆ,ಜು.10: ತಂಬಾಕು ಉತ್ಪನ್ನಗಳು ಒಂದು ರೀತಿಯ ಮನುಕುಲದ ಪೀಡಕಗಳು ಅವುಗಳ ಸೇವನೆಯಿಂದ ಮಾನವನ ಆರೋಗ್ಯ ಕೆಡುವುದಲ್ಲದೆ ಸಮಾಜದ ಸ್ವಾಸ್ಥವೂ ಹಾಳಾಗುತ್ತಹಾಗಾಗಿ ಎಳೇ ವಯಸ್ಸಿನಲ್ಲೇ ಮಕ್ಕಳಿಗೆ ಜಾಗೃತಿ ಮೂಡಿಸುವ ಮೂಲಕ ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರು ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ತಂಬಾಕು ನಿಯಂತ್ರಣಾ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಪರಿಶೀಲನಾ ಸಭೆೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಂಬಾಕು ನಿಯಂತ್ರಣಾ ಕಾನೂನುಗಳ ಪರಿಣಾಮಕಾರಿ ಜಾರಿ ಕುರಿತ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು ಸೇವನೆ ಕುರಿತು ಸರಕಾರದ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಬಹಳ ಜರಗುತ್ತಿದ್ದರೂ ತಂಬಾಕು ಸೇವನೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಹಾಗಾಗಿ ಇಂದಿನ ಸಭೆಗೆ ಆಗಮಿಸಿರುವ ಅಧಿಕಾರಿಗಳು ಎನ್‌ಸಿಸಿ, ಎನ್ನೆಸ್ಸೆಸ್ ಘಟಕಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಮಗ್ರ ಚರ್ಚೆ, ನಡೆಸಿ ಇರುವ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಚಾಲಕರಾದ ದುರ್ಗಪ್ಪ ಎಸ್ ಮಾಚನೂರು ಅವರು ಮಾತನಾಡಿ, ಈ ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ 16x
45 ಸೇ.ಮೀ ಅಳತೆಯಲ್ಲಿ ಧೂಮಪಾನ ನಿಷೇಧದ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗಿದೆ. ಈ ಅಳತೆಗಿಂತ ಕಡಿಮೆ ಅಥವಾ ಬೇರೆ ಬೇರೆ ರೀತಿ ಫಲಕ ಪ್ರದರ್ಶಿದರೂ ಹೊಟೇಲ್, ಹಾಗೂ ರಸ್ಟೋರೆಂಟ್‌ಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ರೆನ್ ಇರಬೇಕಾಗಿರುವುದು ಅವಶ್ಯಕವಾಗಿದ್ದು, ಆ ಕೊಠಡಿಯ ಮುಂಭಾಗದಲ್ಲಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಚ್.ಡಿ ವಿಶ್ವನಾಥ, ಡಾ. ಜಿ.ಡಿ ರಾಘವನ್ ಮೇಲ್ವಿಚಾರಕರಾದ ಆರ್.ವಿ ಕುಪ್ಪದ, ಸುರೇಶ್‌ಬಾಬು ಓಂಕಾರಪ್ಪ, ಆಂಜನೇಯ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.







