ಕಾಸರಗೋಡು: ಮನೆಯಂಗಳದಲ್ಲಿ ಗಾಂಜಾ ಗಿಡ - ಆರೋಪಿ ಸೆರೆ

ಕಾಸರಗೋಡು, ಜು.10: ಔಷಧಿ ಸಸ್ಯ ಎಂದು ನಂಬಿಸಿ ಮನೆಯಂಗಳದಲ್ಲಿ ಗಾಂಜಾ ಗಿಡಗಳನ್ನು ನೆಟ್ಟ ನಾಡ ವೈದ್ಯನೋರ್ವನನ್ನು ಬದಿಯಡ್ಕ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಅಡ್ಕಸ್ಥಳದ ದಿನೇಶ್ ಪೈ (60) ಎಂದು ಗುರುತಿಸಲಾಗಿದೆ. ನಾಲ್ಕು ಅಡಿ ಎತ್ತರದಲ್ಲಿ ಬೆಳೆದ ನಾಲ್ಕು ಗಿಡಗಳು ಈತನ ಮನೆ ಅಂಗಳದಲ್ಲಿ ಪತ್ತೆಯಾಗಿದೆ. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು.
Next Story





