ಕಾರುಗಳ ಮಧ್ಯೆ ಢಿಕ್ಕಿ: ಹಲವರಿಗೆ ಗಾಯ
ಕಾರ್ಕಳ, ಜು.10: ಮಾಳ ಗ್ರಾಮದ ವಾಟೆಹಳ್ಳ ಸಮೀಪದ ತಿರುವಿನಲ್ಲಿ ಎರಡು ಕಾರುಗಳ ಮಧ್ಯೆ ರವಿವಾರ ಮಧ್ಯಾಹ್ನ 12:15ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮಾಳ ಚೆಕ್ಪೋಸ್ಟ್ ಕಡೆಯಿಂದ ಕುದುರೆಮುಖ ಕಡೆಗೆ ಹೋಗುತ್ತಿದ್ದ ಕಾರಿಗೆ ಎಸ್.ಕೆ. ಬಾರ್ಡರ್ ಕಡೆಯಿಂದ ಬಂದ ಟಾಟಾ ಇಂಡಿಕಾ ಕಾರು ಢಿಕ್ಕಿ ಹೊಡೆಯಿತು. ಇದರಿಂದ ಕಾರಿನಲ್ಲಿದ್ದ ಅನಂತಾಚಾರ್, ಅವರ ಪತ್ನಿ ಗಾಯತ್ರಿ, ಮಗ ಆದರ್ಶ ಹಾಗೂ ಇಂಡಿಕಾ ಕಾರಿನಲ್ಲಿದ್ದ ಹಲವು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳು ಕಾರ್ಕಳದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story