ಹ್ಯೂಸ್ಟನ್: ಪೊಲೀಸರಿಂದ ಬಂದೂಕುಧಾರಿಯ ಹತ್ಯೆ
ಹ್ಯೂಸ್ಟನ್, ಜು.10: ಇಬ್ಬರು ಪೊಲೀಸ್ ಅಧಿಕಾರಿಗಳೆಡೆಗೆ ಬಂಧೂಕನ್ನು ಗುರಿಯಿಟ್ಟ 24 ವರ್ಷದ ವ್ಯಕ್ತಿಯೊಬ್ಬನನ್ನು ಶನಿವಾರ ಅಮೆರಿಕದ ಹ್ಯೂಸ್ಟನ್‌ನಲ್ಲಿ ಕೊಲ್ಲಲಾಗಿದೆ. ಡಲ್ಲಾಸ್ ನಗರದಲ್ಲಿ ಶುಕ್ರವಾರ ನಡೆದ ಪ್ರತಿಭಟನಾ ರ್ಯಾಲಿಯ ವೇಳೆ ಬಂದೂಕುಧಾರಿಯೊಬ್ಬ ಐವರು ಪೊಲೀಸರನ್ನು ಹತ್ಯೆಗೈದ ಎರಡು ದಿನಗಳ ಬಳಿಕ ಈ ಘಟನೆ ನಡೆದಿದೆ. ಪೊಲೀಸರಿಬ್ಬರು ನಗರದ ಬೀದಿಯೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ವ್ಯಕ್ತಿಯೊಬ್ಬ ಬಂಧೂಕನ್ನು ಎತ್ತಿಹಿಡಿದಿರುವುದನ್ನು ಗಮನಿ ಸಿದರು. ಕೂಡಲೇ ಎಚ್ಚೆತ್ತುಕೊಂಡ ಅವರು ಅದನ್ನು ಕೆಳಗಿಳಿಡುವಂತೆ ಆತನಿಗೆ ಸೂಚಿಸಿದರು. ಆದರೆ, ಆತ ಅವರೆಡೆಗೆ ಬಂಧೂಕನ್ನು ಗುರಿಯಿರಿಟ್ಟನೆನ್ನಲಾಗಿದೆ. ಕೂಡಲೇ ಪೊಲೀಸ್ ಅಧಿಕಾರಿಗಳಿಬ್ಬರೂ ಅತನ ಮೇಲೆ ಗುಂಡು ಹಾರಿಸಿ, ಹತ್ಯೆಗೈದರೆಂದು ಮೂಲಗಳು ತಿಳಿಸಿವೆ.
ಈ ಶೂಟೌಟ್ ಪ್ರಕರಣದಲ್ಲಿ ಒಳಗೊಂಡ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಯೆಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





