ಬಸ್ -ಕಾರು ಢಿಕ್ಕಿ: ಒಬ್ಬನಿಗೆ ಗಾಯ
ಮಂಜೇಶ್ವರ, ಜು.10: ಪಳ್ಳತ್ತಡ್ಕ ಕೆರೆಮೂಲೆಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರುಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಗಾಯಗೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ.
ಕಾರು ಚಾಲಕ ಪೆರ್ಲ ಕನ್ನಟಿಕಾನ ನಿವಾಸಿ ಜಂಶೀರ್(30)ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರಿನಿಂದ ಕಾಸರಗೋಡಿನತ್ತ ಚಲಿಸುತ್ತಿದ್ದ ಬಸ್ ಹಾಗೂ ಪೆರ್ಲಕ್ಕೆ ತೆರಳುತ್ತಿದ್ದ ಕಾರು ಪರಸ್ಪರ ಢಿಕ್ಕಿ ಹೊಡೆದಿತ್ತು.
Next Story





