‘ಉತ್ತಮ ಅಡಿಕೆ ಬೆಳೆಗಾರ’ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು, ಜು.11: ಕಾಸರಗೋಡಿನ ಇಂಡಿಯನ್ ಸೊಸೈಟಿ ಫಾರ್ ಪ್ಲಾಂಟೇಶನ್ ಕ್ರಾಪ್ಸ್ ರವರು 2016ನೆ ಸಾಲಿನ ಉತ್ತಮ ಅಡಿಕೆ ಬೆಳೆಗಾರ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಪ್ರಶಸ್ತಿಯು 15,000 ರೂ. ಬಹುಮಾನವನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಡಿಸೆಂಬರ್‌ನಲ್ಲಿ ನೀಡ ಲಾಗುವುದು.
ಆಸಕ್ತರು ಸಮೀಪದ ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿಮಾಡಿ ನೀಡಬೇಕು. ಅರ್ಜಿ ಸಲ್ಲಿಸಲು ಆ.15 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ತಾಲೂಕು ಮಟ್ಟದ ಹಿರಿಯ ಸಹಾಯಕ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು/ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ತೋಟಗಾರಿಕೆ ಉಪನಿರ್ದೇಶಕರ ಕಚೇರಿ (ಜಿಪಂ) ಮಂಗಳೂರು-0824-2423628, ಹಿರಿಯ ಸಹಾ ಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, (ಜಿಪಂ) ಮಂಗಳೂರು- 0824-2423615, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿಪಂ) ಪುತ್ತೂರು-08251-230905, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿಪಂ) ಸುಳ್ಯ-08257-232020, ಸಹಾಯಕ ತೋಟಗಾರಿಕೆ ಕಚೇರಿ (ಜಿಪಂ) ಬಂಟ್ವಾಳ-08255-234102, ಸಹಾಯಕ ತೋಟಗಾರಿಕಾ ಕಚೇರಿ(ಜಿಪಂ) ಬೆಳ್ತಂಗಡಿ- 08256-232148.





