ಸ್ಟಾರ್ ಶಿಕ್ಷಣ ಸಂಸ್ಥೆಯ ರಕ್ಷಕ-ಶಿಕ್ಷಕ ಸಭೆ
ಮಂಗಳೂರು, ಜು.11: ಸ್ಟಾರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ರಕ್ಷಕ-ಶಿಕ್ಷಕರ ಸಭೆ ಹಾಗೂ ಈದ್ ಸ್ನೇಹಕೂಟ ನಡೆಯಿತು. ಸಂಸ್ಥೆಯ ನಿರ್ದೇಶಕ ಮುಹಮ್ಮದ್ ಸಲೀಂ ಮಲಾರ್ ಈದ್ ಸಂದೇಶ ನೀಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್, ಉಪಾಧ್ಯಕ್ಷರಾಗಿ ಹಮೀದ್, ಕಲ್ಯಾಣ ಅಧಿಕಾರಿಯಾಗಿ ರೇಶ್ಮಾ, ಕೋಶಾಧಿಕಾರಿಯಾಗಿ ಮುಹಮ್ಮದ್ ರಫೀಕ್, ಕಾರ್ಯದರ್ಶಿಯಾಗಿ ಪ್ರಾಂಶುಪಾಲೆ ಪ್ರಭಾ ನವೀನ್, ಸಂಚಾಲಕಾರಾಗಿ ಸಂಸ್ಥೆಯ ನಿರ್ದೇಶಕ ಮುಹಮ್ಮದ್ ಸಲೀಂ ಮಲಾರ್, ಸದಸ್ಯರಾಗಿ ಅಬ್ದುಲ್ ಹಮೀದ್, ಬಶೀರ್, ಅಬ್ದುಲ್ ಖಾದರ್, ಎಂ.ಎಚ್ ಹಸೈನಾರ್, ನಸೀಮಾ, ಮುಹಮ್ಮದ್ ಮುಸ್ತಫಾ ಆಯ್ಕೆಯಾದರು.
ಪ್ರಾಧ್ಯಾಪಕಿ ದೀಪಾ ಲೋಕನಾಥ್ ಸಂಸ್ಥೆಯ ನೀತಿ ನಿಯಮಗಳನ್ನು ತಿಳಿಸಿದರು. ಪ್ರಾಧ್ಯಾಪಕಿ ಆಶಾ ವಂದಿಸಿದರು. ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.
Next Story





