ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಂಘದ ತಾಲೂಕು ಅಧ್ಯಕ್ಷರಾಗಿ ಧನಂಜಯ ರಾವ್

ಬೆಳ್ತಂಗಡಿ, ಜು.11: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಂಘ ಬೆಳ್ತಂಗಡಿ ತಾಲೂಕು ಇದರ ನೂತನ ಅಧ್ಯಕ್ಷರಾಗಿ ವಕೀಲ ಬಿ. ಕೆ. ಧನಂಜಯ ರಾವ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಕೆ. ದಿನೇಶ್ ರಾವ್ ಉಜಿರೆ, ಉಪಾಧ್ಯಕ್ಷರಾಗಿ ಪಿ. ರಘುಚಂದ್ರ ರಾವ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ರಾವ್ ಉಜಿರೆ, ಜತೆ ಕಾರ್ಯದರ್ಶಿಯಾಗಿ ಸದಾಶಿವ ರಾವ್ ಉಜಿರೆ ಆಯ್ಕೆಯಾಗಿದ್ದಾರೆ.
ಮಹಿಳಾ ಸಂಘದ ಅಧ್ಯಕ್ಷರಾಗಿ ರೇಖಾ ಸುಧೀರ್ ರಾವ್ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ರಾಜಶ್ರೀ ಧನಂಜಯ ರಾವ್, ಯುವ ವೇದಿಕೆ ಅಧ್ಯಕ್ಷರಾಗಿ ನಿತಿನ್ ರಾವ್ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಹರೀಶ್ ರಾವ್ ನಾಳ ಆಯ್ಕೆಯಾದರು. 35 ಮಂದಿ ನಿರ್ದೇಶಕರ ಮಂಡಳಿಯನ್ನು ರಚಿಸಲಾಯಿತು.
Next Story





