ದ್ವೇಷ ಭಾಷಣ ಮಾಡುವವರು ದೇಶಕ್ಕೆ ಅಪಾಯ: ನೈರೋಬಿ ವಿವಿಯಲ್ಲಿ ಮೋದಿ

ನೈರೋಬಿ,ಜು.12: ಇಸ್ಲಾಮಿಕ್ ಸ್ಟೇಟ್ ಹೆಜ್ಜೆಗುರುತನ್ನು ವಿಶ್ವಾದ್ಯಂತ ವ್ಯಾಪಿಸುವ ಉದ್ದೇಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, "ದ್ವೇಷಭಾಷಣ ಹಾಗೂ ಹಿಂಸೆ ಪ್ರಚೋದಿಸುವ" ಭಾಷಣ ಮಾಡುವವರು ಸಮಾಜದ ಸಾಮರಸ್ಯಕ್ಕೆ ಅಪಾಯ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಯುವಕರು, ಇಂಥ ಭಯೋತ್ಪಾದಕ ಸಿದ್ಧಾಂತಗಳ ವಿರುದ್ಧ ಉತ್ತಮ ತತ್ವಗಳ ಪ್ರತಿಪಾದನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಭಯೋತ್ಪಾದಕರಿಗೆ ನೆಲೆ ಒದಗಿಸುವುದು ಹಾಗೂ ಅವರನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಕ್ರಮ ಖಂಡನೀಯ ಎಂದು ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ನೈರೋಬಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು. ಭಯೋತ್ಪಾದನೆ ಹಾಗೂ ದ್ವೇಷ ಮುಕ್ತವಾದ ವಿಶ್ವವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕು. ಆರ್ಥಿಕ ಪ್ರಗತಿಯ ಪ್ರಯೋಜನ ಜನಸಾಮಾನ್ಯರಿಗೆ ಸಿಗಬೇಕಾದರೆ, ಜನರ ಸುರಕ್ಷತೆ ಹಾಗೂ ಭದ್ರತೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
Next Story





