ಕಳಚಿದ ಅರ್ನಬ್ ಗೋಸ್ವಾಮಿ ಮುಖವಾಡ
ತಮ್ಮ ಜೊತೆ ಟೈಮ್ಸ್ ನೌ ನಡೆಸಿದ ಎರಡು ಸಂದರ್ಶನಗಳನ್ನು ಬಿಡುಗಡೆ ಮಾಡಿದ ಝಾಕಿರ್ ನಾಯ್ಕ್

ತಮ್ಮಿಂದ ಢಾಕಾ ಭಯೋತ್ಪಾದಕರು ಪ್ರೇರಣೆ ಪಡೆದುಕೊಂಡಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ ಈಗ ಟೈಮ್ಸ್ ನೌ ತಮ್ಮ ಜೊತೆ ನಡೆಸಿದ ಎರಡು ಸಂದರ್ಶನಗಳನ್ನು ಬಿಡುಗಡೆ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಮಾಡಿದ್ದಾರೆ. ಈ ಆಡಿಯೋದಲ್ಲಿ ಟೈಮ್ಸ್ ನೌ ಪತ್ರಕರ್ತೆ ಮೇಘಾ ಪ್ರಸಾದ್ ಮುಂಬೈ ಮೂಲದ ಝಾಕಿರ್ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ.
ಮೊದಲ ಸಂದರ್ಶನದಲ್ಲಿ ಪ್ರಸಾದ್ ಶಾಂತವಾಗಿ ಮಾತನಾಡಿ ಗೌರವಯುತವಾಗಿ ಸಂದರ್ಶನ ಮುಗಿಸುತ್ತಾರೆ. ಆದರೆ ನಂತರ ಸಂದರ್ಶಕಿ ಮತ್ತೆ ಕರೆ ಮಾಡುತ್ತಾರೆ. ಸೌದಿ ಅರೆಬಿಯದ ಮಕ್ಕಾದ ಹೊಟೇಲಿನಲ್ಲಿದ್ದ ಝಾಕಿರ್ ಅವರಿಗೆ ತಮ್ಮ ಸಂದರ್ಶನದಲ್ಲಿ ದೊಡ್ಡ ತಾಂತ್ರಿಕ ಧೋಷವಾಗಿದೆ ಎಂದು ಹೇಳಿ ಮತ್ತೊಮ್ಮೆ ಸಂದರ್ಶನಕ್ಕಾಗಿ ಕೇಳುತ್ತಾರೆ.ಆದರೆ ಮತ್ತೊಮ್ಮೆ ಆಕೆ ಮಾತನಾಡುವಾಗ ಆಕೆಯ ಮಾತಿನ ಶೈಲಿಯೇ ಬದಲಾಗಿತ್ತು. ಮೇಘಾ ಬಹಳ ಉಗ್ರ ಧ್ವನಿಯಲ್ಲಿ ತಮ್ಮ ಜೊತೆ ಮಾತನಾಡಿದ್ದನ್ನು ಝಾಕಿರ್ ಗುರುತಿಸಿದ್ದರು.
ಮೊದಲ ಸಂದರ್ಶನದಲ್ಲಿ ತಾನು ಹೇಳಿದ್ದು ಮೇಲಿನ ಸಿಬ್ಬಂದಿಗೆ ಇಷ್ಟವಾಗದೆ ಇದ್ದುದಕ್ಕೆ ಎರಡನೇ ಬಾರಿ ಸಂದರ್ಶಿಸಲಾಗುತ್ತಿದೆಯೇ ಎಂದು ಝಾಕಿರ್ ಆಕೆಯನ್ನು ಪ್ರಶ್ನಿಸುತ್ತಾರೆ. ತನ್ನ ಮೊದಲ ಸಂದರ್ಶನದ ಧ್ವನಿ ಮುದ್ರಣವನ್ನೂ ಕೊಡುವುದಾಗಿ ಝಾಕಿರ್ ಹೇಳುತ್ತಾರೆ. ತಮ್ಮ ಬಳಿ ಆ ಸಂದರ್ಶನ ದಾಖಲಾಗಿದೆ ಎಂದೂ ಅವರು ಹೇಳಿದ್ದರು. ಆದರೆ ಸಂದರ್ಶಕಿ ಮತ್ತೊಮ್ಮೆ ಮಾತನಾಡಲು ಬಯಸಿದ್ದರು. ಎರಡನೇ ಸಂದರ್ಶನದಲ್ಲಿ ಮೇಘ ಮತ್ತು ಝಾಕಿರ್ ನಡುವೆ ತೀವ್ರ ವಾಗ್ವಾದವಾಗುತ್ತದೆ. ಅಮಾಯಕರನ್ನು ಕೊಲೆ ಮಾಡಲು ಬೋಧಿಸಿದ ಮೇಲೆ ಝಾಕಿರ್ ಹೇಗೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಿದೆ ಎನ್ನುವ ಸಂದರ್ಶಕಿಯ ಪ್ರಶ್ನೆ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತದೆ. ಈ ಪ್ರಶ್ನೆಗೆ ಝಾಕಿರ್ ಕ್ಷಮೆಯಾಚಿಸುವಂತೆ ಪತ್ರಕರ್ತೆಯನ್ನು ಕೇಳುತ್ತಾರೆ.ಪತ್ರಕರ್ತೆಯಾಗಿ ಅನೈತಿಕವಾಗಿ ಕಾರ್ಯ ನಿರ್ವಹಿಸುವ ನಂತರವೂ ನೀನು ಹೇಗೆ ನಿದ್ರೆ ಮಾಡುತ್ತೀ ಎಂದು ಝಾಕಿರ್ ಪ್ರಶ್ನಿಸುತ್ತಾರೆ. ಮೇಘ ಕ್ಷಮೆಯಾಚಿಸಲು ನಿರಾಕರಿಸುವ ಕಾರಣ ಸಂಭಾಷಣೆ ಅರ್ಧದಲ್ಲಿ ನಿಲ್ಲುತ್ತದೆ.
ಕೃಪೆ: www.jantakareporter.com







