ಕಾರ್ಕಳ: ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾರ್ಕಳ, ಜು.12: ವಿದ್ಯುತ್ ಕಂಬವೇರಿ ದುರಸ್ತಿ ನಡೆಸುತ್ತಿದ್ದ ಸಂದರ್ಭ ವಿದ್ಯುತ್ ಪ್ರವಹಿಸಿ ದಿನಕೂಲಿ ನೌಕರ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಗರದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
ಹಿರ್ಗಾನ ಗ್ರಾಮದ ಕೆರೆಮನೆ ನಿವಾಸಿ ಸುಬ್ರಹ್ಮಣ್ಯ (50) ಮೃತಪಟ್ಟ ದುರ್ದೈವಿ.
ಇವರು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರ ಬಳಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಕಾರ್ಕಳ ಬಸ್ಸು ನಿಲ್ದಾಣ ಸಮೀಪದಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದ ವೇಳೆ ಶಾಕ್ ತಗಲಿದ ಪರಿಣಾಮ ಮೇಲಿನಿಂದ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೆಸ್ಕಾಂ ನಿಯಮದ ಪ್ರಕಾರ ವಿದ್ಯುತ್ ಕಂಬವೇರಲು ಮೆಸ್ಕಾಂ ಸಿಬ್ಬಂದಿ ಹೊರತುಪಡಿಸಿ ಅನ್ಯ ಕಾರ್ಮಿಕರಿಗೆ ಅವಕಾಶವಿಲ್ಲದಿದ್ದರೂ ಮೆಸ್ಕಾಂ ಸಿಬ್ಬಂದಿಯ ಸಮ್ಮಖದಲ್ಲೇ ವಿದ್ಯುತ್ ಕಂಬವೇರಿದ್ದು, ಅಧಿಕಾರಗಳ ನಿರ್ಲಕ್ಷವೇ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Next Story





