ಕಾರ್ಕಳ: ಬಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ

ಕಾರ್ಕಳ, ಜು.12: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ನಿರ್ಲಕ್ಷವನ್ನು ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ನಗರದ ಬಸ್ಸು ನಿಲ್ದಾಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಡಿವೈಎಸ್ಪಿ ಗಣಪತಿ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರು ಆತ್ಮಹತ್ಯೆಗೆ ಶರಣಾಗಲು ರಾಜ್ಯ ಸರಕಾರದ ಈ ಹಿಂದಿನ ಗೃಹ ಸಚಿವರು ಸೇರಿದಂತೆ ಕೆಲ ಅಧಿಕಾರಿಗಳ ಕಿರುಕುಳವೇ ಕಾರಣ. ಅವರ ಸಾವಿಗೆ ಕಾರಣರಾದವರನ್ನು ಶೀಘ್ರ ಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಸಚಿವ ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರ ಬಿಜೆಪಿಯ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ವಕ್ತಾರ ನಂದಕುಮಾರ್ ಹೆಗ್ಡೆ, ಯುವ ಮೋರ್ಚಾದ ನವೀನ್ ನಾಯಕ್, ರವೀಂದ್ರ ಕುಮಾರ್, ಜಿ.ಪಂ ಸದಸ್ಯೆ ರೇಶ್ಮಾ ಉದಯ್ ಕುಮಾರ್ ಶೆಟ್ಟಿ, ಜಿ.ಪಂ ಸದಸ್ಯ ಉದ್ ಕೋಟ್ಯಾನ್, ಜಿ.ಪಂ ಮಾಜಿ ಸದಸ್ಯೆ ಸವಿತಾ ಎಸ್. ಕೋಟ್ಯಾನ್, ಪುರಸಬಾ ಅಧ್ಯಕ್ಷೆ ಅನಿತಾ ಆರ್ ಅಂಚನ್, ಉಪಾಧ್ಯಕ್ಷ ಗಿರಿದರ್ ನಾಯಕ್, ನಕ್ರೆ ಅಂತೋನಿ ಡಿಸೋಜ, ನರಸಿಂಹ ಕಾಮತ್ ಸಾಣೂರು, ಆರಿಫ್ ಕಲ್ಲೊಟ್ಟೆ, ಪಾಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.







