ಮುರ-ಬೀಟಿಗೆ ಜಿ.ಪಂ ರಸ್ತೆಗೆ ಕಳಪೆ ಡಾಮರೀಕರಣ: ಬಿಜೆಪಿ ವತಿಯಿಂದ ಧರಣಿ

ಪುತ್ತೂರು, ಜು.12: ಪುತ್ತೂರು ತಾಲೂಕಿನ ಮುರ ಎಂಬಲ್ಲಿಂದ ಬಂಟ್ವಾಳ ತಾಲೂಕಿನ ಪೇರಮುಗೇರು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಮುರ ಬೀಟಿಗೆ ಜಿ.ಪಂ ರಸ್ತೆಗೆ 1 ಕೋಟಿ ರೂ. ವೆಚ್ಚದಲ್ಲಿ ಕಳೆದ 2 ತಿಂಗಳ ಹಿಂದಷ್ಟೇ ಡಾಂಬರೀಕರಣ ಮಾಡಲಾಗಿದ್ದು, ಕಳಪೆ ಕಾಮಗಾರಿಯ ಕಾರಣದಿಂದ ಎದ್ದು ಹೋಗಿದ್ದು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಧರಣಿ ನಡೆಸಲಾಯಿತು.
ಡಾಂಬರಿಕರಣಕ್ಕೆ ಅದರದ್ದೇ ಆದ ನಿಯಮಗಳಿವೆ. ಈ ನಿಯಗಳನ್ನು ಉಲ್ಲಂಘಿಸಿ ರಸ್ತೆಯನ್ನು ಹಾಳುಮಾಡಲಾಗಿದೆ. ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಯಲ್ಲಿ ಎದ್ದು ಹೋದ ಕಡೆಗೆ ತೇಪೆ ಹಚ್ಚಿ ಸರಿಪಡಿಸದೆ ಸಮರ್ಪಕವಾಗಿ ಮರು ಡಾಮರೀಕರಣ ನಡೆಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಧರಣಿಯಲ್ಲಿ ಬಿಜೆಪಿ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೇಶವ ಬಜತ್ತೂರು, ಜಿ.ಪಂ.ಸದಸ್ಯೆ ಸಯನಾ ಜಯಾನಂದ, ಜಯಾನಂದ ಕೆ. ಅರುಣ್ ಕುಮಾರ್ ಪುತ್ತಿಲ, ಪುತ್ತೂರು ನಗರಸಬಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಡೀಕಯ್ಯ ಪೆರ್ವೋಡಿ ಸೇರಿದಂತೆ ಹಲವಾರು ಮಂದಿ ಸ್ಥಳೀಯರು ಭಾಗವಹಿಸಿದ್ದರು.





