ಉಚಿತ ಸಮವಸ್ತ್ರ ವಿತರಣೆ
ಹೊನ್ನಾವರ, ಜು.12: ತಾಲೂಕಿನ ಕಾಸರಕೋಡಿನ ಕರುಣಾಲಯ ಟ್ರಸ್ಟ್ ವತಿಯಿಂದ ಪಟ್ಟಣದ ಪ್ರಭಾತ ನಗರದ ಸೈಂಟ್ ಅಂತೋನಿ ಪ್ರೌಢ ಶಾಲೆಯ 115 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಾ.ಸಿ.ಎಂ. ಜಾರ್ಜ್ ಮಾತನಾಡಿ, ಲುಕಾಸ್ ಫೆರ್ನಾಂಡಿಸ್ ಅವರು ಕರುಣಾಲಯ ಟ್ರಸ್ಟ್ ಸ್ಥಾಪಿಸಿಕೊಂಡು ಅದರ ಮೂಲಕ ಪ್ರತಿ ವರ್ಷ ತನ್ನ ದುಡಿಮೆಯ ಕೆಲವು ಭಾಗವನ್ನು ಸಮಾಜ ಸೇವಾ ಕಾರ್ಯಕ್ರಮಗಳಿಗೆ ನೀಡುತ್ತಿದ್ದು ಮಾದರಿಯಾಗಿದ್ದಾರೆ. ಸೈಂಟ್ ಅಂತೋನಿ ಪ್ರೌಢ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸತತ ನಾಲ್ಕು ವರ್ಷಗಳಿಂದ ಉಚಿತವಾಗಿ ಸಮವಸ್ತ್ರ ನೀಡುತ್ತಿದ್ದಾರೆ ಎಂದು ಹೇಳಿದರು.
ಕರುಣಾಲಯ ಟ್ರಸ್ಟ್ ಅಧ್ಯಕ್ಷ ಲುಕಾಸ್ ಫೆರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾಯಿ, ತಂದೆಯರನ್ನು ಗೌರವಿಸಬೇಕು. ಅವರು ತಮ್ಮ ಮಕ್ಕಳಿಗಾಗಿ ಪಡುವ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಓದಿ ಸಾಧನೆ ಮಾಡಿ, ದೇಶ ಹಾಗೂ ಸಮಾಜ ಹೆಮ್ಮೆ ಪಡುವ ಪ್ರಜೆಯಾಗಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಖ. ಹೆಗಡೆ, ನ್ಯಾಯವಾದಿ ಸತೀಶ್ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಪತ್ರಿಕಾ ವರದಿಗಾರ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಸೈಂಟ್ ಅಂತೋನಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಫಾ. ಅಶೋಕ್ ಜೋಸೆಫ್ ಸ್ವಾಗತಿಸಿದರು. ಶಿಕ್ಷಕ ಜೇಕಬ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಮನೋಹರ ನಾಯ್ಕ ವಂದಿಸಿದರು.







