ಪೆರುಮಾಳ್ ಮುರುಗನ್ ತೀರ್ಪಿನಿಂದ ಪಾಠ
ಪ್ರಾಚೀನ ಭಾರತದ ‘ನಿಯೋಗ ಪದ್ಧತಿ’ಯ ಬಗ್ಗೆ ಸಾವರ್ಕರ್ ಕೃತಿಯಿಂದ ಮೋದಿ ತಿಳಿಯುವುದು ಸಾಕಷ್ಟಿದೆ

ಹಿಂದೂ ಸಂಪ್ರದಾಯದಲ್ಲಿ ನಿಯೋಗ ಎಂಬ ಪದ್ಧತಿಯಲ್ಲಿ ಸಂತಾನಹೀನ ಮಹಿಳೆ ತನ್ನ ಪತಿಯ ಹೊರತಾದ ಪುರುಷನಿಂದ ಸಂತಾನ ಪಡೆಯಲು ಅವಕಾಶವಿದೆ. ಈ ಸಂಪ್ರದಾಯವನ್ನು ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ಈ ವಾರ ನೀಡಿದ ತನ್ನ ಐತಿಹಾಸಿಕ ತೀರ್ಪಿನಲ್ಲಿ, ಪೆರುಮಾಳ್ ಮುರುಗನ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ಈ ನಿಯೋಗ ಪದ್ಧತಿಯನ್ನು ಪುಸ್ತಕದಲ್ಲಿ ಪ್ರತಿಪಾದಿಸಿದ್ದಕ್ಕೆ ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಈ ಸಂಪ್ರದಾಯವನ್ನು ನಿರಾಕರಿಸಬಹುದಾದ ಅಂಶವನ್ನೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಮಹಾಭಾರತದ ಪಾಂಡವರ ತಾಯಿಯಾದ ಕುಂತಿಯ ಉದಾಹರಣೆಯನ್ನು ನೀಡಲಾಗಿದೆ. ಮೋದಿಯವರ ಪ್ರತಿಪಾದನೆಯಂತೆ, ಮುಂಬೈನ ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ 2014ರ ಅಕ್ಟೋಬರ್‌ನಲ್ಲಿನ ಮಹಾಭಾರತದ ಒಂದು ನಿದರ್ಶನವನ್ನು ಉಲ್ಲೇಖಿಸಿದ್ದರು. ಕುಂತಿ ತನ್ನ ಮದುವೆಗೆ ಮುನ್ನ ಕರ್ಣನನ್ನು ಪುತ್ರನಾಗಿ ಪಡೆದ ನಿದರ್ಶನವನ್ನು ವಿವರಿಸಿ, ಪ್ರಾಚೀನ ಭಾರತ ವಂಶವಾಹಿ ವಿಜ್ಞಾನದಲ್ಲಿ ಎಷ್ಟು ಪರಿಣತಿ ಸಾಧಿಸಿತ್ತು ಎನ್ನುವುದನ್ನು ಉದಾಹರಿಸಿದ್ದರು. ಪುರಾಣ ಕಥೆಯನ್ನು ಕ್ರಾಂತಿಕಾರಿಯಾಗಿ ವಿವರಿಸಿ, ದೇವರನ್ನು ಸ್ಮರಿಸಿ ತನಗೆ ಬೇಕಾದ ಮಗನನ್ನು ಪಡೆದ ಕುಂತಿಯ ದೃಷ್ಟಾಂತವನ್ನು ಹೀಗೆ ಬಣ್ಣಿಸಿದ್ದರು:
‘‘ನಾವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸಿದರೆ, ಮಹಾಭಾರತದ ಕರ್ಣ ತನ್ನ ತಾಯಿಯ ಗರ್ಭದಿಂದ ಜನಿಸಿಲ್ಲ. ಅಂದರೆ ಆ ವೇಳೆಗಾಗಲೇ ವಂಶವಾಹಿ ವಿಜ್ಞಾನ ಬೆಳೆದಿತ್ತು ಎನ್ನುವುದಕ್ಕೆ ಇದು ಸಾಕ್ಷಿ. ಈ ಕಾರಣದಿಂದ ಕರ್ಣ ತನ್ನ ತಾಯಿಯ ಗರ್ಭದ ಹೊರಗೆಯೇ ಜನಿಸುವುದು ಸಾಧ್ಯವಾಯಿತು.’’
ಈ ಯೋಗ ಪ್ರತಿಪಾದಕ ಸಹಜವಾಗಿಯೇ ನಿಯೋಗದಂಥ ಪುರಾಣೀಕೃತ ಪದ್ಧತಿಯನ್ನು ಪ್ರಾಚೀನ ಭಾರತದ ವಂಶವಾಹಿ ವಿಜ್ಞಾನದ ಸಾಧನೆ ಎನ್ನಲು ಅಸಹ್ಯ ಪಡುತ್ತಾರೆ.
ಪ್ರಧಾನಿಯವರ ಭಾಷಣದ ಬಗ್ಗೆ ಉಲ್ಲೇಖ ಕೋರ್ಟ್ ತೀರ್ಪಿನಲ್ಲಿ ಇಲ್ಲದಿದ್ದರೂ, ನಿಯೋಗ ಪದ್ಧತಿಯನ್ನು ಅನಿಷ್ಟ ಎಂದು ಪರಿಗಣಿಸುವ ಇತರ ದೃಷ್ಟಾಂತಗಳನ್ನು ಉಲ್ಲೇಖಿಸಿದೆ. ಇದು ತಮಿಳು ಕಾದಂಬರಿಕಾರ ಮುರುಗನ್ ಮಧೌರ್‌ಬಾಗನ್ ಅವರ ವಿವರಣೆಗೆ ಹಿನ್ನೆಲೆಯಾಗಿದೆ. ಈ ಕೃತಿಯ ವಿರುದ್ಧ ಪ್ರಚಾರಾಂದೋಲನ ಕೈಗೊಂಡಿರುವ ಬಗ್ಗೆ ಉಲ್ಲೇಖಿಸಿ, ಲಾವಣ್ಯ ಮನೋಹರನ್ ಅವರ ಲೇಖನವನ್ನೂ ಪರಿಗಣಿಸಿದೆ. ಇವರೆಲ್ಲರೂ ಮಹಾಭಾರತವನ್ನು ಬಿಟ್ಟು, ಮಧುರುಬಾಗನ್ ವಿರುದ್ಧ ಏಕೆ ಪ್ರತಿಭಟಿಸುತ್ತಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿದೆ.
ಇದಲ್ಲದೆ ಸರ್ವ ದಮನ್ ಸಿಂಗ್ ಅವರ ಒಂದು ಕೃತಿಯ ಭಾವಾನುಭವವನ್ನೂ ಪರಿಗಣಿಸಿದೆ:
‘‘ಪಾಂಡು ತನ್ನ ಪತ್ನಿ ಕುಂತಿಗೆ ಯಾವುದೇ ಪರಪುರುಷನ ಜತೆಗೆ ಪಾಪಪ್ರಜ್ಞೆ ಇಲ್ಲದೇ ಮಿಲನ ಹೊಂದಬಹುದು ಎಂಬ ಸಮಯಪ್ರಜ್ಞೆ ಇತ್ತು ಎಂದು ಹೇಳಿದ್ದ. ಇಲ್ಲಿ ಇಂಥ ಮಹಿಳೆಯರು ಪರಪುರುಷನ ಜತೆಗೆ ಮಿಲನ ಹೊಂದುವುದನ್ನು ಆ ಪುರುಷರ ಪತ್ನಿಯರು ನೋಡಿ ಆನಂದಿಸುತ್ತಿದ್ದರು.’’
ದೇವದತ್ ಪಟ್ನಾಯಕ್ ಅವರ ಇನ್ನೊಂದು ಕೃತಿಯಲ್ಲಿನ ಅಂಶಗಳನ್ನು ತೀರ್ಪಿನಲ್ಲಿ ಹೀಗೆ ಸಂಕ್ಷಿಪ್ತವಾಗಿ ಹೇಳಲಾಗಿದೆ; ‘‘ಒಬ್ಬ ನಿರ್ವೀರ್ಯ ಪುರುಷ, ತನ್ನ ಪತ್ನಿಗೆ ದೇವರನ್ನು ಆಹ್ವಾನಿಸಿ, ತಂದೆಯಾದ ಬಗ್ಗೆ ಉಲ್ಲೇಖಗಳಿವೆ. ಈ ಹಿನ್ನೆಲೆಯಲ್ಲಿ ಕುಂತಿ ಮಕ್ಕಳ ಪ್ರಕರಣ ಪರಿಶೀಲಿಸಬೇಕು. ಹಲವು ದೇವರನ್ನು ಪ್ರಚೋದಿಸಲಾಗಿತ್ತು. ಇದರಿಂದಾಗಿ ವಿಭಿನ್ನ ಮಕ್ಕಳ ಜನನಕ್ಕೆ ಕಾರಣವಾಯಿತು’’
ಆಕ್ರೋಶಕ್ಕೆ ಗುರಿಯಾದ ಲೇಖಕರ ವಕೀಲರು ಸಲ್ಲಿಸಿದ್ದ ದಾಖಲೆಗಳನ್ನು ತೀರ್ಪು ಹೀಗೆ ಉಲ್ಲೇಖಿಸಿದೆ. ನಿಯೋಗದ ಪರಿಕಲ್ಪನೆಯು, ವಿವಾಹೇತರ ಸಂಬಂಧದ ಮೂಲಕ ಮಕ್ಕಳನ್ನು ಪಡೆಯುವುದನ್ನು ಪವಿತ್ರವೆಂದು ಪರಿಗಣಿಸುವ ಉದ್ದೇಶ ಹೊಂದಿದೆ. ಉದಾಹರಣೆಗೆ ಮಹಾಭಾರತದ ಕುಂತಿ ಇದಕ್ಕೆ ಒಳ್ಳೆಯ ನಿದರ್ಶನ. ಇದರ ಜತೆಗೆ ವೈವಾಹಿಕ ಸಂಬಂಧವಲ್ಲದೇ ಇತರ ಲೈಂಗಿಕ ಸಂಬಂಧಗಳನ್ನು ಹೊಂದಿರುವುದನ್ನು ಪರಿಗಣಿಸಲಾಗುತ್ತಿತ್ತು ಮತ್ತು ಉತ್ತೇಜಿಸಲಾಗುತ್ತಿತ್ತು.
ಇನ್ನೊಂದೆಡೆ ವಿರೋಧಿ ವಕೀಲ ನಿಯೋಗದ ಬಗೆಗಿನ ಪುರಾಣದ ಉಲ್ಲೇಖವನ್ನು ಲಂಗುಲಗಾಮಿಲ್ಲದೇ, ಅಶ್ಲೀಲ ಹಾಗೂ ಅಸಹ್ಯವಾಗಿ ಬರೆಯಲು ಆಧಾರವಾಗಿ ಪರಿಗಣಿಸಲಾಗದು. ಅದು ಕೂಡಾ ದೇವಾಲಯವೊಂದರ ಉತ್ಸವವನ್ನು ಒಳಗೊಂಡಂತೆ ಹೀಗೆ ಬರೆಯಲಾಗದು ಎಂದು ಪ್ರತಿಪಾದಿಸಿದ್ದರು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ‘‘ಮಹಾಭಾರತ ಸೇರಿದಂತೆ ಭಾರತೀಯ ಪುರಾಣಗಳು ವಿವಾಹೇತರ ಲೈಂಗಿಕ ಸಂಬಂಧದ ಹಲವು ಉದಾಹರಣೆಗಳನ್ನು ನೀಡುತ್ತವೆ. ಅದರಲ್ಲೂ ಮುಖ್ಯವಾಗಿ ಪರಪುರುಷನಿಂದ ಸಂತಾನ ಭಾಗ್ಯ ಪಡೆದ ನಿದರ್ಶನಗಳು ಇವೆ. ಅದು ಕೂಡಾ ಪ್ರಜ್ಞಾವಂತ ವರ್ಗದಲ್ಲಿ...ಮೇಲೆ ಉಲ್ಲೇಖಿಸಿರುವಂತೆ ಮಹಾಭಾರತ ಹಾಗೂ ಇತರ ಹಲವು ಸಾಹಿತ್ಯಗಳಲ್ಲಿ ಉಲ್ಲೇಖವಾದ ಅಂಶಗಳು ನಮ್ಮ ಇತಿಹಾಸದ ಭಾಗ. ಇಷ್ಟಾಗಿಯೂ ಇದನ್ನು ಅಶ್ಲೀಲ ಅಥವಾ ನಿಷೇಧಿಸಬೇಕು ಎನ್ನಬಹುದೇ?’’ ಎಂದು ಪ್ರಶ್ನಿಸಿದೆ.
ಕರ್ಣನಂಥ ನಿದರ್ಶನಗಳ ಹಿನ್ನೆಲೆಯಲ್ಲಿ, ವಿವಾಹೇತರ ಸಂಬಂಧ ಅಥವಾ ವಿವಾಹಪೂರ್ವ ಲೈಂಗಿಕತೆ ಸ್ಪಷ್ಟವಾಗಿ ಕಾಣುವ ಪರಿಸ್ಥಿತಿಯಲ್ಲಿ, ಪ್ರಧಾನಿಯಂಥವರೇ ನಿಯೋಗವನ್ನು ವಂಶವಾಹಿ ವಿಜ್ಞಾನ ಎಂದು ತಪ್ಪಾಗಿ ಅರ್ಥೈಸಬಹುದು.
ಉದಾರ ತತ್ವಗಳು
ಈ ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಯ ಕೃಷ್ಣ ಕೌಲ್ ಅವರು, ‘‘ಅಚ್ಚರಿ ಎಂದರೆ ಪುರುಷ ಹಾಗೂ ಮಹಿಳೆಯರ ಸಂಬಂಧದ ಉದಾರ ತತ್ವಗಳ ವಿಷಯದಲ್ಲಿ ಲೈಂಗಿಕತೆ ಹಾಗೂ ಧರ್ಮ, ಪುರಾಣಗಳಲ್ಲಿ ಹೆಚ್ಚು ಉದಾರವಾಗಿತ್ತು ಎನ್ನಬಹುದು’’ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನ ದೇವಸ್ಥಾನವೊಂದರ ಜಾತ್ರೆಯ ಒಂದು ಅಂಗ ಎನ್ನುವುದನ್ನು ಮುರುಗನ್ ತಮ್ಮ ಕೃತಿಯಲ್ಲಿ ಪ್ರತಿಪಾದಿಸಿರುವ ಬಗ್ಗೆ, ‘‘ಈ ಕಾದಂಬರಿ ಸಾಮಾಜಿಕ ಪದ್ಧತಿಯ ಬಗ್ಗೆ ಉಲ್ಲೇಖ ನೀಡಿದೆ. ಇದು ಹಿಂದೆ ಬಹುಶಃ ಇದ್ದಿದ್ದರೆ, ಅದು ಸಂತಾನಹೀನ ದಂಪತಿಯ ಸಮಸ್ಯೆಯನ್ನು ಈ ವಿಚಿತ್ರ ವಿಧಾನದ ಮೂಲಕ ಪರಿಹರಿಸುವ ಅಂಗವಾಗಿತ್ತು. ಇಷ್ಟಾಗಿಯೂ ಇದು ಅಪೇಕ್ಷಿತ ಪದ್ಧತಿಯಾಗಿರಲಿಲ್ಲ. ಅಂದರೆ ಹತಾಶೆಯ ಪ್ರತಿಫಲನದ ಕ್ರಮ ಇದು. ಸಂತಾನಹೀನ ದಂಪತಿ ಇಂಥ ಕೆಲಸವನ್ನು ಮಾಡುವಂಥ ವಾತಾವರಣವನ್ನು ಸಮಾಜ ಸೃಷ್ಟಿಸುತ್ತಿತ್ತು’’ ಎಂದು ಹೇಳಿದೆ.
ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುರುಗನ್ 2015ರ ಜನವರಿಯಲ್ಲಿ ‘‘ಲೇಖಕನಾಗಿ ನಾನು ಸತ್ತಿದ್ದೇನೆ’’ ಎಂದು ಹತಾಶವಾಗಿ ಹೇಳಿದ್ದರು. ವೈವಿಧ್ಯಮಯ ಸಂಸ್ಕೃತಿಯನ್ನು ಹೊಸದಾಗಿ ಶುದ್ಧೀಕರಣ ಮಾಡುವುದು ಬೇಕಿಲ್ಲ ಎಂದು ಕೋರ್ಟ್ ಹೇಳಿದೆ.
ಇಂಥ ಶುದ್ಧೀಕರಣದ ಪ್ರಯತ್ನಗಳು ಎಷ್ಟರ ಮಟ್ಟಿಗೆ ಐತಿಹಾಸಿಕ ಅಣಕ ಎನ್ನುವುದನ್ನು ತಿಳಿದುಕೊಳ್ಳಬಹುದು. ಸುಮಾರು ಒಂದು ಶತಮಾನದ ಹಿಂದೆ ವಿನಾಯಕ ದಾಮೋದರ ಸಾವರ್ಕರ್, ‘ಹಿಂದುತ್ವ’ ಎಂಬ ಪದವನ್ನು ಮೊದಲ ಬಾರಿಗೆ ಪರಿಚಯಿಸಿದ ಕೃತಿಯಲ್ಲಿ ನಿಯೋಗದ ಬಗ್ಗೆ ಉಲ್ಲೇಖಿಸಿದ್ದರು. ಇದರ ಜತೆಗೆ ಅಂತರ್ಜಾತಿ ವಿವಾಹಗಳು ವೇದ ಕಾಲದಿಂದಲೂ ಇದ್ದವು ಎನ್ನುವುದನ್ನು ಅವರು ಪ್ರತಿಪಾದಿಸಿದ್ದರು.
‘‘ಪಾಂಡು ತಮ್ಮ ಪತ್ನಿಯರು ನಿಯೋಗ ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಿದ್ದ. ಜಾತಿ ಗೊತ್ತಿಲ್ಲದ ಪುರುಷರ ಜತೆಗಿನ ಪ್ರಣಯವನ್ನು ಅವರು ಅನುಭವಿಸಿ, ನಮ್ಮ ಪುರಾಣ ಪುರುಷರ ಹುಟ್ಟಿಗೆ ಕಾರಣರಾಗಿದ್ದರು’’ ಎಂದು ಸಾವರ್ಕರ್ ಹೇಳಿದ್ದರು.
ಆದ್ದರಿಂದ ನಿಯೋಗ ಪದ್ಧತಿಯನ್ನು ಸಾರಾಸಗಟಾಗಿ ತಳ್ಳಿಹಾಕುವುದು ಒಂದೆಡೆಯಾದರೆ, ಹಿಂದುತ್ವ ಪ್ರತಿಪಾದಕ ಸಾವರ್ಕರ್ ಅವರೇ ಕುಂತಿಯ ನಿದರ್ಶನವನ್ನು ನೀಡಿ, ದೇವರಿಂದ ಮಕ್ಕಳು ಪಡೆದದ್ದನ್ನು ಉಲ್ಲೇಖಿಸಿದ್ದಾರೆ. ಸಾವರ್ಕರ್ ಮುಕ್ತವಾಗಿಯೇ ಒಪ್ಪಿಕೊಂಡಿದ್ದ ನಿಯೋಗ ಪದ್ಧತಿಯನ್ನು, ಅಂಬೇಡ್ಕರ್ ಕಟುವಾಗಿ ಟೀಕಿಸಿದ್ದರು. ಪ್ರಾಚೀನ ಆರ್ಯನ್ ಸಮಾಜದ ನೈತಿಕತೆಯನ್ನು ಪ್ರಶ್ನಿಸಿದ್ದ ಅವರು, ತಮ್ಮ ‘ರಿಡೆಲ್ಸ್ ಇನ್ ಹಿಂದೂಯಿಸಂ’ ಎಂಬ ಕೃತಿಯಲ್ಲಿ, ಈ ಪದ್ಧತಿಯನ್ನು ಸಂಪೂರ್ಣ ಸ್ವೇಚ್ಛಾಚಾರ ಎಂದು ಜರೆದಿದ್ದರು. ಏಕೆಂದರೆ, ಮಹಿಳೆ ಎಷ್ಟು ಪುರುಷರ ಜತೆಗೆ ಇಂಥ ಸಂಬಂಧ ಹೊಂದಿ ಮಕ್ಕಳನ್ನು ಪಡೆಯಬಹುದು ಎಂಬುದಕ್ಕೆ ಮಿತಿ ಇಲ್ಲ ಎಂದು ಹೇಳಿದ್ದರು. ಕುಂತಿ ನಾಲ್ಕು ನಿಯೋಗ ಹೊಂದಿದ್ದರು ಎಂದು ಉಲ್ಲೇಖಿಸಿದ್ದಾರೆ. ಜತೆಗೆ ನಿಯೋಗದ ಅವಧಿಗೂ ಮಿತಿ ಇರಲಿಲ್ಲ ಎನ್ನುವುದನ್ನೂ ಎತ್ತಿ ಹಿಡಿದಿದ್ದಾರೆ.
‘‘ಅದು ಒಂದು ರಾತ್ರಿ ಇರಬಹುದು ಅಥವಾ 12 ವರ್ಷ ಅಥವಾ ಹೆಚ್ಚಿನ ಅವಧಿಗೂ ಇರಬಹುದು. ಇಂಥ ಕೃತ್ಯದಲ್ಲಿ ಗಂಡ ಕೇವಲ ನಿದ್ದೆಯ ಸಂಗಾತಿ’’ ಎಂದು ಹೇಳಿದ್ದರು.
ಸಾವರ್ಕರ್ ಹಾಗೂ ಅಂಬೇಡ್ಕರ್ ಕೂಡಾ ಇಷ್ಟೊಂದು ಪ್ರತಿರೋಧ ಎದುರಿಸಿರಲಿಲ್ಲ. ಪೆರುಮಾಳ್ ಮುರುಗನ್ ಸರಕಾರ ಹಾಗೂ ಸರಕಾರೇತರ ವರ್ಗದಲ್ಲೂ ಸಾಕಷ್ಟು ಕಿರುಕುಳ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ಮೌಲ್ಯ ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿಗೆ ಸೀಮಿತವಾಗದೇ, ಸಾಮಾಜಿಕ ಅನಿಷ್ಟಗಳ ವರೆಗೂ ವಿಸ್ತರಿಸುತ್ತದೆ. ಇದು ನಿಯೋಗವನ್ನು ವಂಶವಾಹಿ ವಿಜ್ಞಾನ ಎಂದು ಪ್ರತಿಪಾದಿಸುವ ಮೋದಿಯ ಪ್ರಯತ್ನಗಳನ್ನು ಬೆತ್ತಲುಗೊಳಿಸುವ ಮತ್ತು ಮುರುಗನ್ ತಮ್ಮನ್ನು ಲೇಖಕನೇ ಅಲ್ಲ ಎಂದು ಘೋಷಿಸಿಕೊಳ್ಳುವ ಘಟನೆಗಳ ನಡುವೆ ಸಂಬಂಧವನ್ನು ಕಲ್ಪಿಸಿದೆ.








