ಟೆನಿಸ್ ಆಟಗಾರ್ತಿ ಇವಾನೊವಿಕ್, ಜರ್ಮನಿಯ ಫುಟ್ಬಾಲ್ ಆಟಗಾರ ಶ್ಟೆನ್‌ಸ್ಟಿಗರ್ ವಿವಾಹ

ಪ್ಯಾರಿಸ್, ಜು.12: ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸರ್ಬಿಯದ ಟೆನಿಸ್ ಆಟಗಾರ್ತಿ ಅನಾ ಇವಾನೊವಿಕ್ ಹಾಗೂ ಜರ್ಮನಿಯ ಫುಟ್ಬಾಲ್ ಆಟಗಾರ ಬ್ಯಾಸ್ಟಿಯನ್ ಶ್ಟೆನ್‌ಸ್ಟಿಗರ್ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ವಿವಾಹವಾದರು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಇಬ್ಬರು ಕ್ರೀಡಾಪಟುಗಳು ಬೋಟ್ ಮೇಲೆ ಸವಾರಿ ಮಾಡಿ ಗಮನ ಸೆಳೆದರು. ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಇವಾನೊವಿಕ್ ಹಾಗೂ ಜರ್ಮನಿಯ ಬ್ಯಾಸ್ಟಿಯನ್ 2014 ರಿಂದ ಡೇಟಿಂಗ್ ನಡೆಸುತ್ತಿದ್ದರು.
ಇವಾನೊವಿಕ್ ಇತ್ತೀಚೆಗೆ ನಡೆದ ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದರು. ಬ್ಯಾಸ್ಟಿಯನ್ ಯುರೋ ಕಪ್‌ನಲ್ಲಿ ಭಾಗವಹಿಸಿದ್ದರು. ಜರ್ಮನಿ ಆ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಆತಿಥೇಯ ಫ್ರಾನ್ಸ್ ವಿರುದ್ಧ ಸೋತು ಕೂಟದಿಂದ ಹೊರ ನಡೆದಿತ್ತು.
ವಿವಾಹ ಸಮಾರಂಭದಲ್ಲಿ ಜರ್ಮನಿ ಫುಟ್ಬಾಲ್ ತಂಡದ ಕೋಚ್ ಜೊಕಿಮ್ ಲಾ ಹಾಗೂ ಜರ್ಮನಿ ಸ್ಟಾರ್ ಆಟಗಾರ ಥಾಮಸ್ ಮುಲ್ಲರ್, ಟೆನಿಸ್ ಆಟಗಾರರಾದ ಆ್ಯಂಡಿ ಮರ್ರೆ ಹಾಗೂ ಆ್ಯಂಜೆಲಿಕ್ ಕೆರ್ಬರ್ ಸಾಕ್ಷಿಯಾದರು.
Next Story





