ಅಪಘಾತ: ಗಾಯಾಳು ಮೃತ್ಯು
ಮಣಿಪಾಲ, ಜು.12: 80 ಬಡಗುಬೆಟ್ಟು ಗ್ರಾಮದ ಟ್ಯಾಪ್ಮಿ ಕ್ರಾಸ್ ಬಳಿ ಜು.5ರಂದು ರಿಕ್ಷಾ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ 76 ಬಡಗುಬೆಟ್ಟು ಮಂಚಿಕೆರೆಯ ನಿವಾಸಿ, ರಿಕ್ಷಾ ಚಾಲಕ ಶಿವರಾಮ ನಾಯಕ್ ಸೋಮವಾರ ಸಂಜೆ 6:30ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





