ನಾಳೆ ವಿದ್ಯುತ್ ನಿಲುಗಡೆ
ಮಂಗಳೂರು, ಜು.12: ಕೆಪಿಟಿಸಿಎಲ್ ವತಿಯಿಂದ 220 ಕೆವಿ ಎಸ್.ಆರ್.ಎಸ್.ನಿಂದ ಹೊರಡುವ 110 ಕೆವಿ ಕಾವೂರು-ಕೆ.ಐ.ಒ.ಸಿ.ಎಲ್-ಬೈಕಂಪಾಡಿ ಲೈನಿನಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜು.14ರಂದು ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆಯವರೆಗೆ ಈ ಎನ್‌ಎಂಪಿಟಿ, ಎಚ್‌ಪಿಸಿಎಲ್, ಯುಪಿಸಿಎಲ್, ಬ್ರೈಟ್ ಪ್ಯಾಕೇಜರ್ಸ್, ರುಚಿಸೋಯ, ರಾಜಶ್ರೀ ಪ್ಯಾಕೇಜರ್ಸ್, ಬಿಎಎಸ್‌ಎಫ್, ಎಂಸಿಎಫ್, ಎಂಆರ್‌ಪಿಎಲ್, ಎನ್‌ಐಟಿಕೆ, ಭಾರತ್ ಬ್ಯಾರಲ್, ಅಂಬುಜಾ ಸಿಮೆಂಟ್, ಕೋಸ್ಟಲ್ ಚಿಪ್ ಬೋರ್ಡ್, ತಣ್ಣೀರು ಬಾವಿ, ಮೀನಕಳಿಯ, ಹೊಸಬೆಟ್ಟು, ಚಿತ್ತಾಪುರ, ಬೈಕಂಪಾಡಿ, ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಪಣಂಬೂರು, ಕೋಡಿಕಲ್, ಕೊಟ್ಟಾರ, ಬೆಂಗ್ರೆ, ತೋಟ ಬೆಂಗ್ರೆ, ಕಸಬ ಬೆಂಗ್ರೆ, ಕುದ್ರೋಳಿ ಬೆಂಗ್ರೆ, ಸುರತ್ಕಲ್, ಮುಲ್ಕಿ, ಕಾಟಿಪಳ್ಳ, ಕಿನ್ನಿಗೋಳಿ, ಚೇಳ್ಯಾರು, ಕುತ್ತೆತ್ತೂರು, ಹಳೆಯಂಗಡಿ. ಕಟೀಲು, ಮುಕ್ಕ, ಸಸಿಹಿತ್ಲು ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.





