ಭಿಕ್ಷಾಟನೆ: ಐವರು ಮಕ್ಕಳ ರಕ್ಷಣೆ

ಉಡುಪಿ, ಜು.12: ಇಲ್ಲಿನ ಸರ್ವಿಸ್ ಬಸ್ ನಿಲ್ದಾಣದ ಸಮೀಪ ಮಂಗಳವಾರ ಸಂಜೆ ಪೋಷಕರೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿದ್ದ ರಾಜಸ್ಥಾನ ಮೂಲದ ಐವರು ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.
ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಲ್ಲಿ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸಂಘವು ಖಚಿತ ಮಾಹಿತಿಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಭಿಕ್ಷೆ ಬೇಡುತ್ತಿದ್ದ 7-8 ವರ್ಷ ಪ್ರಾಯದ ಮೂವರು ಮಕ್ಕಳು ಹಾಗೂ ಇಬ್ಬರು ಹಸುಗೂಸುಗಳನ್ನು ರಕ್ಷಿಸಿ ಬಳಿಕ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಮಕ್ಕಳ ಪುನವರ್ಸತಿ ಕೇಂದ್ರದಲ್ಲಿ ಪೋಷಕರೊಂದಿಗೆ ತಾತ್ಕಾಲಿಕವಾಗಿ ಸೇರಿಸಿದೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಉಡುಪಿ ನಿರೀಕ್ಷಕ ರಾಮಮೂರ್ತಿ ಎಸ್.ಎಸ್., ಮಕ್ಕಳ ರಕ್ಷಣಾಧಿಕಾರಿ ಅನಿಲ್ ಹಟ್ಟಿ, ಕಾರ್ಕಳ ಕಾರ್ಮಿಕ ನಿರೀಕ್ಷಕ ಪ್ರಸನ್ನ ಕುಮಾರ್, ಬಾಲ ಕಾರ್ಮಿಕ ಯೋಜನ ಸಂಘದ ಯೋಜನಾ ನಿರ್ದೇಶಕ ಪ್ರಭಾಕರ ಆಚಾರ್ಯ, ಮಕ್ಕಳ ರಕ್ಷಣಾಧಿ ಕಾರಿ ಶ್ವೇತಾ, ಸಮಾಜ ಕಾರ್ಯಕರ್ತೆಯರಾದ ಕಪಿಲಾ, ಅಂಬಿಕಾ ಪಾಲ್ಗೊಂಡಿದ್ದರು.
Next Story





