ಕೆ.ಎಸ್.ಅಮೀರ್ ಅಹ್ಮದ್ಗೆ ಯು.ಎಸ್.ಎ. ಅಂತಾರಾಷ್ಟ್ರೀಯ ತಮಿಳ್ ವಿವಿಯಿಂದ ಡಾಕ್ಟರೇಟ್ ಪದವಿ
![ಕೆ.ಎಸ್.ಅಮೀರ್ ಅಹ್ಮದ್ಗೆ ಯು.ಎಸ್.ಎ. ಅಂತಾರಾಷ್ಟ್ರೀಯ ತಮಿಳ್ ವಿವಿಯಿಂದ ಡಾಕ್ಟರೇಟ್ ಪದವಿ ಕೆ.ಎಸ್.ಅಮೀರ್ ಅಹ್ಮದ್ಗೆ ಯು.ಎಸ್.ಎ. ಅಂತಾರಾಷ್ಟ್ರೀಯ ತಮಿಳ್ ವಿವಿಯಿಂದ ಡಾಕ್ಟರೇಟ್ ಪದವಿ](https://www.varthabharati.in/sites/default/files/images/articles/2016/07/13/vv.gif)
ಮಂಗಳೂರು, ಜು.12: ರಾಜಕೀಯ ಕ್ಷೇತ್ರದ ಮೂಲಕ ನಡೆಸಿರುವ ಸಮಾಜ ಸೇವಾ ಚಟುವಟಿಕೆಗಾಗಿ ಐಎನ್ಬಿಸಿಡಬ್ಲುಎಫ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ರಾಜ್ಯ ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ರಿಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಡಲ್ಟ್ ಆ್ಯಂಡ್ ಕಂಟಿನ್ಯೂಯಿಂಗ್ ಎಜುಕೇಶನ್ ಸಂಸ್ಥೆಯ ಮಾನ್ಯತೆ ಪಡೆದಿರುವ ಯು.ಎಸ್.ಎ ಇಂಟರ್ನ್ಯಾಶನಲ್ ತಮಿಳ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ (ಡಾಕ್ಟರ್ ಆಫ್ ಲೆಟರ್ಸ್) ನೀಡಿ ಗೌರವಿಸಿದೆ.
ತಮಿಳುನಾಡಿನ ಮದುರೈನಲ್ಲಿರುವ ಸಂಸ್ಥೆಯ ಶಾಖೆಯ ಕಚೇರಿಯಲ್ಲಿ ಜು.9ರಂದು ಪದವಿ ಪ್ರದಾನ ಮಾಡ ಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story