ಬಿಳಿನೆಲೆ: ರಸ್ತೆಯ ಮೇಲೆ ಉರುಳಿದ ಮರ
![ಬಿಳಿನೆಲೆ: ರಸ್ತೆಯ ಮೇಲೆ ಉರುಳಿದ ಮರ ಬಿಳಿನೆಲೆ: ರಸ್ತೆಯ ಮೇಲೆ ಉರುಳಿದ ಮರ](https://www.varthabharati.in/sites/default/files/images/articles/2016/07/13/a60bfe50-d4b3-4726-ac44-aef74266f2a0.jpg)
ಕಡಬ, ಜು.13: ಬುಧವಾರ ಸಂಜೆ ಸುರಿದ ಮಳೆಗೆ ಮರ ಬಿದ್ದು ರಸ್ತೆ ತಡೆ ಉಂಟಾದ ಘಟನೆ ಬಿಳಿನೆಲೆ ಎಂಬಲ್ಲಿ ನಡೆದಿದೆ.
ಸಂಜೆ 4ರ ಸುಮಾರಿಗೆ ಮರ ಬಿದ್ದು ರಸ್ತೆ ತಡೆಯುಂಟಾದುದರಿಂದಾಗಿ ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.
ಮರವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಮುರಿದುಬಿದ್ದಿದೆ. ಬಳಿಕ ಊರವರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Next Story