ಜು.16ರಂದು ಲೈಂಗಿಕ ಕಿರುಕುಳ ಕಾಯ್ದೆಯ ಕುರಿತು ಕಾರ್ಯಾಗಾರ
ಚಿಕ್ಕಮಗಳೂರು, ಜು.13: ಬೀರೂರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆ, ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಕಡೂರು, ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಕಡೂರು ಮತ್ತು ನ್ಯಾಯವಾದಿಗಳ ಸಂಘ, ಕಡೂರು ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿಗೆ ದುಡಿಯುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕಾಯ್ದೆ-2013 ಕುರಿತು ಜು.16ರಂದು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಸಚಿವೆ ಡಾ.ಪದ್ಮಾ ಶೇಖರ್ ನೆರವೇರಿಸಲಿದ್ದಾರೆ. ಎಸ್.ಬಿ.ಗುಂಜಿಗಾವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಗರಾಜ್ ಎಸ್.ಅಂಕಸದೊಡ್ಡಿ ಅಧ್ಯಕ್ಷ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಕಡೂರು. ಅತಿಥಿಗಳಾಗಿ ಬಿ.ಶಿವಕುಮಾರ್, ಸೀಗೆಹಡ್ಳು ಹರೀಶ್, ಸವಿತಾ ರಮೇಶ್, ಎಂ. ಬಿ. ಮಂಜುನಾಥ್ ಹಾಗೂ ಪ್ರಾಸ್ತಾವಿಕ ನುಡಿಯನ್ನು ಸೂರಿ ಶ್ರೀನಿವಾಸ್ ನುಡಿಯಲಿದ್ದಾರೆ. ಮೊದಲನೆ ಗೋಷ್ಠಿಯಲ್ಲಿ ಲೈಂಗಿಕ ಕಿರುಕುಳ ಕಾಯ್ದೆ ಮತ್ತು ಸವಾಲುಗಳು ಕುರಿತಂತೆ ಬಿ.ಎ.ಮುಚ್ಚಂಡಿ ಮಂಡಿಸಲಿದ್ದಾರೆ. ಎರಡನೆ ಗೋಷ್ಠಿಯಲ್ಲಿ ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿ ಕುರಿತಂತೆ ವಿಷಯ ತಜ್ಞರು ಶಿವಾನಂದ ಲಕ್ಷ್ಮಣ ಮಂಡಿಸಲಿದ್ದಾರೆ. ಮೂರನೆ ಗೋಷ್ಠಿಯಲ್ಲಿ ದುಡಿಯುವ ಮಹಿಳೆಯರು ಮತ್ತು ಲೈಂಗಿಕ ಕಿರುಕುಳ ಕುರಿತಂತೆ ವೈಶಾಲಿ ಅಪರ ಜಿಲ್ಲಾಧಿಕಾರಿ ಮಂಡಿಸಲಿದ್ದಾರೆ. ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ನುಡಿಯನ್ನು ಪ್ರಭಾವತಿ ಎಂ.ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಗೌರವ ಉಪಸ್ಥಿತಿಯನ್ನು ಎಸ್. ಬಿ.ಗುಂಜಿಗಾವಿ ವಹಿಸಲಿದ್ದಾರೆ. ಎಚ್.ಎಂ.ಪ್ರಸನ್ನ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಎಲ್.ಬೋಜೇಗೌಡ ಹಾಗೂ ರೇಣುಕಾ ಉಮೇಶ್, ರೇಖಾ ಹುಲಿಯಪ್ಪಗೌಶ್ರ, ಎ.ಶ್ರೀನಿವಾಸಯ್ಯ, ಕೆ.ಎಸ್.ರಮೇಶ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಅಜ್ಜಂಪುರ ಜಿ. ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.





