Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನ ವಿನ್ಯಾಸಗಳೆಲ್ಲ ನನ್ನ...

ನನ್ನ ವಿನ್ಯಾಸಗಳೆಲ್ಲ ನನ್ನ ಮಕ್ಕಳಿದ್ದಂತೆ ಐ.ಎಂ.ಖಾದ್ರಿ

ಆಕಾಶ್ ಕರ್ಕರೆಆಕಾಶ್ ಕರ್ಕರೆ13 July 2016 10:25 PM IST
share
ನನ್ನ ವಿನ್ಯಾಸಗಳೆಲ್ಲ ನನ್ನ ಮಕ್ಕಳಿದ್ದಂತೆ ಐ.ಎಂ.ಖಾದ್ರಿ

ಆರು ದಶಕಗಳ ವೃತ್ತಿಜೀವನದಲ್ಲಿ ದೇಶಾದ್ಯಂತ ಹಲವು ಕಟ್ಟಡಗಳ ವಿನ್ಯಾಸ ಕೈಗೊಂಡ ಅಪೂರ್ವ ವಾಸ್ತುಶಿಲ್ಪಿ ಐ.ಎಂ.ಖಾದ್ರಿ. ಭೋಪಾಲ್‌ನಲ್ಲಿ ರಾಷ್ಟ್ರೀಯ ನ್ಯಾಯಾಂಗ ಅಕಾಡಮಿ, ಚೆನ್ನೈನಲ್ಲಿ ತಾಜ್ ಕೋರಮಂಡಲ್, ಗೋವಾದಲ್ಲಿ ಫೋರ್ಟ್ ಅಗ್ವಾಡ ಹೋಟೆಲ್ ಕೆಲ ನಿದರ್ಶನಗಳು. ಆದರೆ 86 ವರ್ಷದ ಅವರ ಹೃದಯಕ್ಕೆ ತೀರಾ ಹತ್ತಿರವಾದದ್ದು ಮುಂಬೈ ನಗರ. ಮಹಾನಗರದ ಹಲವು ಗಗನಚುಂಬಿ ಕಟ್ಟಡಗಳ ವಿನ್ಯಾಸ ಮಾಡಿದ್ದಾರೆ. ವರ್ಲಿಯಲ್ಲಿ ಜವಾಹರ್‌ಲಾಲ್ ನೆಹರೂ ಅವರ ಸ್ಮಾರಕವಾಗಿ ನಿರ್ಮಿಸಿದ ನೆಹರೂ ಸೆಂಟರ್, ಮಲಬಾರ್ ಹಿಲ್ಸ್‌ನ ಹವೇರಿ ಬಿಲ್ಡಿಂಗ್, ಮರೈನ್‌ಲೈನ್‌ನ ಇಸ್ಲಾಂ ಜಿಮ್ಖಾನಾ, ಬಾಂದ್ರಾದ ಒಟ್ಟರ್ಸ್‌ ಕ್ಲಬ್ ಈ ಪೈಕಿ ಕೆಲವು.

ವಾಸ್ತುಶಿಲ್ಪಇತಿಹಾಸಕಾರ ಹಾಗೂ ವಿಮರ್ಶಕ ಕಲ್ವಾನ್ ಮೆಹ್ತಾ ಅವರು ಐ.ಎಂ.ಖಾದ್ರಿಯವರ ವಾಸ್ತುಶಿಲ್ಪಗಳ ಬಗ್ಗೆ ರಚಿಸಿದ ಕೃತಿ ಕಳೆದ ತಿಂಗಳು ಬಿಡುಗಡೆಯಾಗಿದೆ. ಇದು ಖಾದ್ರಿಯವರ ವೃತ್ತಿ ಹಾಗೂ ವಿಶ್ವಾದ್ಯಂತ ಅನಾವರಣಗೊಂಡ ಅವರ ವಾಸ್ತುಶಿಲ್ಪಕೌಶಲ ಗಳನ್ನು ಪರಿಚಯಿಸುತ್ತದೆ. ತಮ್ಮ ಶಿವಸಾಗರ ಎಸ್ಟೇಟ್ ಕಚೇರಿಯಲ್ಲಿ ನೀಡಿದ ಸಂದರ್ಶನದಲ್ಲಿ ಖಾದ್ರಿ ತಮ್ಮ ವೃತ್ತಿಜೀವನದ ಸಿಂಹಾವಲೋಕನ ಮಾಡಿಕೊಂಡರು. ಮುಂಬೈನ ಕಟ್ಟಡಗಳ ಮೇಲೆ ತಮ್ಮ ಪ್ರಭಾವ ಹಾಗೂ ಇತ್ತೀಚೆಗಿನ ದಿನಗಳಲ್ಲಿ ಮುಂಬೈ ಅಂದಗೆಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಖಾದ್ರಿ ಏಳು ವರ್ಷದವರಿದ್ದಾಗ, ಪ್ರಾಥಮಿಕ ಶಿಕ್ಷಣಕ್ಕಾಗಿ ದಿಲ್ಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯಕ್ಕೆ ಬಂದರು. ಇದು 1930ರ ದಶಕದ ಮಧ್ಯಭಾಗ. ಹೊಸ ಕಟ್ಟಡ ತಲೆ ಎತ್ತುವ ಸಂದರ್ಭದಲ್ಲಿ ವಿಶ್ವದ ಖ್ಯಾತ ವಾಸ್ತುಶಿಲ್ಪಿಯ ಪ್ರಭಾವಕ್ಕೆ ಒಳಗಾದರು.
‘‘ವಾಸ್ತುಶಿಲ್ಪಿ ಹೆನ್ಜ್ ಅವರು ನಿರ್ಮಿಸಿದ ಆಕರ್ಷಕ ಕಟ್ಟಡ ಅದ್ಭುತವಾಗಿತ್ತು’’ ಎಂದು ನೆನಪಿಸಿಕೊಳ್ಳುತ್ತಾರೆ. ‘‘ಅದನ್ನು ದೇವರೇ ನಿರ್ಮಿಸಿರಬೇಕು. ಒಬ್ಬ ಮಗು ಕೂಡಾ ಅದರ ಸೊಬಗನ್ನು ಗುರುತಿಸಬಹುದಿತ್ತು’’ ಎಂದು ಅವರ ಜತೆ ಕೆಲ ವರ್ಷಗಳ ಕಾಲ ಕೆಲಸ ಮಾಡಿದ ಅವರು ವಿವರಿಸುತ್ತಾರೆ.
ಅವರ ಮೊದಲ ವಿನ್ಯಾಸ, ಮುಂಬೈನ ಬ್ರಿಗ್‌ಟನ್ ಅಪಾರ್ಟ್ ಮೆಂಟ್. ಇದು ಅವರ ಬಾಲ್ಯದ ಅಹ್ಮದಾಬಾದ್‌ನ ಮನೆಯನ್ನು ಹೋಲುತ್ತಿತ್ತು. ದೊಡ್ಡ ಉದ್ಯಾನವನ ಹೊಂದಿದ ಉತ್ತಮ ಮನೆ ಅದು. ಈ ಕಟ್ಟಡದ ವಿನ್ಯಾಸದಲ್ಲಿ ಟೆರೇಸ್ ಗಾರ್ಡನ್ ಸೇರಿಸಿದರು. ಇದು ನಗರದಲ್ಲಿ ಮೊಟ್ಟಮೊದಲ ಆಕರ್ಷಣೆಯಾಗಿತ್ತು. ಇದು ಹಲವು ಹಿರಿಯ ವಾಸ್ತುಶಿಲ್ಪಿಗಳ ಕೆಂಗಣ್ಣಿಗೆ ಗುರಿಯಾಯಿತು. ನೀವು ನಿಮ್ಮ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದೀರಿ ಎಂದು ಹಲವು ಮಂದಿ ಹಿರಿಯ ವಾಸ್ತುಶಿಲ್ಪಿಗಳು ಹೇಳಿದ್ದರು. ಸಮುದ್ರದ ಕಿನಾರೆಯಲ್ಲಿ ನೀವು ನೆಲದಲ್ಲಿ ಉದ್ಯಾನವನ ಮಾಡಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ಟೆರೇಸ್‌ನಲ್ಲಿ ಏನು ಮಾಡಲು ಸಾಧ್ಯ? ಮುಂಬೈ ಬಿಸಿ ಬಗ್ಗೆ ನಿಮಗೆ ಕಲ್ಪನೆ ಇದೆಯೇ? ಇಂಥ ವ್ಯರ್ಥ ಪ್ರಯತ್ನ ಬೇಡ ಎಂದಿದ್ದರು.

ಆದರೆ ಖಾದ್ರಿ ತಮಗೆ ತೋಚಿದ್ದನ್ನೇ ಮಾಡಿದರು. ಆ ಬಳಿಕ ಅವರ ಎಲ್ಲ ವಿನ್ಯಾಸಗಳಲ್ಲೂ ಒಂದಷ್ಟು ಹಸಿರಿನ ಅಂಶ ಎದ್ದುಕಾಣುತ್ತದೆ. ಅವರ ಗಮನ ಸೆಳೆದ ಮತ್ತೊಂದು ವಿನ್ಯಾಸವೆಂದರೆ, ವಿಶಿಷ್ಟ ಜಾಲಿ. ‘‘ನನ್ನ ಮೇಲೆ ಪರಿಣಾಮ ಬೀರಿದ್ದು ಮೊಘಲ್ ವಾಸ್ತುಶಿಲ್ಪ. ಮೊಘಲ್ ವಾಸ್ತುಶಿಲ್ಪದ ವೈಶಿಷ್ಟ್ಯ ಎಂದರೆ ಕ್ಯಾಲಿಗ್ರಫಿ. ಆದ್ದರಿಂದ ಎಲ್ಲೆಲ್ಲಿ ಅಗತ್ಯವಿತ್ತೋ ಅಲ್ಲೆಲ್ಲ ನಾನು ಜಾಲಿ ಬಳಸಿದ್ದೇನೆ’’ ಎಂದು ಅವರು ವಿವರಿಸುತ್ತಾರೆ. ಪ್ರತಿ ಜಾಲಿಗೂ ವಿಭಿನ್ನ ಅರ್ಥಗಳಿವೆ. ಉದಾಹರಣೆಗೆ ನೆಹರೂ ಕೇಂದ್ರದಲ್ಲಿ ಮೂರು ಆಯಾಮದ ಜಾಲಿ ಇದೆ. ಇದು ನೆಹರೂ ತಮ್ಮ ಜೇಬಿನಲ್ಲಿ ಸದಾ ಇಟ್ಟುಕೊಳ್ಳುತ್ತಿದ್ದ ಗುಲಾಬಿ ಹೂವು.
ಅವರು ಹೇಳುವ ಪ್ರಕಾರ, ಬಾಂದ್ರಾದಲ್ಲಿರುವ ಒಟ್ಟೆರ್ಸ್‌ ಕ್ಲಬ್ ತೀರಾ ಆಸಕ್ತಿದಾಯಕ ಇತಿಹಾಸ ಹೊಂದಿದೆ. ‘‘ನನ್ನ ಕೆಲಸ ಯಾವಾಗಲೂ ಸಮುದ್ರದ ಒಂದು ಭಾಗವಾಗಬೇಕು ಎನ್ನುವುದು ನನ್ನ ಆಶಯ. ಆದ್ದರಿಂದ ನಾನು ಅಮೃತಶಿಲೆ ಬಳಸಲು ಬಯಸಿದೆ. ಆದರೆ ಅದನ್ನು ವಿಭಿನ್ನವಾಗಿ ಬಳಸುವುದು ನನ್ನ ಗುರಿಯಾಗಿತ್ತು. ನನ್ನ ಜತೆ ಕೆಲಸ ಮಾಡಿದ ಗುತ್ತಿಗೆದಾರ ಕೆಲ ಹಿರಿಯ ಕುಶಲಕರ್ಮಿಗಳನ್ನು ರಾಜಸ್ಥಾನದಿಂದ ಕರೆತಂದಿದ್ದರು. ಅವರೆಲ್ಲರೂ, ನೀವು ಅಮೃತಶಿಲೆಗೆ ಅವಮಾನ ಮಾಡುತ್ತಿದ್ದೀರಿ. ಅದನ್ನು ಕಲ್ಲಿನಂತೆ ಬಳಸುತ್ತೀರಿ ಎಂದು ಆಕ್ಷೇಪಿಸಿದರು. ಆದರೆ ಗುತ್ತಿಗೆದಾರರಿಗೆ ಇದರಲ್ಲಿ ಆಸಕ್ತಿ ಇತ್ತು. ಆದ್ದರಿಂದ ನಾನು ಒಮ್ಮೆ ಪ್ರಯತ್ನಿಸೋಣ ಎಂದು ಹೇಳಿದೆ. ನಿಮಗೆ ಇಷ್ಟವಿಲ್ಲ ಎಂದಾದರೆ ನಿಲ್ಲಿಸೋಣ ಎಂದು ಹೇಳಿದೆ. ಕಾಮಗಾರಿ ಮುಗಿದ ಬಳಿಕ ಹೇಗೆ ಕಾಣುತ್ತದೆ ಎಂದು ಕುಶಲಕರ್ಮಿಗಳಲ್ಲಿ ಕೇಳಿದೆ. ಇದು ಕೆಟ್ಟದಾಗಿ ಕಾಣುತ್ತಿಲ್ಲ ಎಂದು ಅವರು ಹೇಳಿದರು. ಆ ಬಳಿಕ ಅವರು ಹೆಚ್ಚಿನ ಶ್ರದ್ಧೆ ವಹಿಸಿದರು.’’ ಕ್ಲಬ್ ವಿನ್ಯಾಸವನ್ನು ತಮ್ಮ ಮಾಸ್ಟರ್‌ಪೀಸ್‌ಗಳಲ್ಲೊಂದು ಎಂದು ಪರಿಗಣಿಸುತ್ತಾರೆ. ಆದರೆ ಕ್ಲಬ್ ಟ್ರಸ್ಟಿಗಳು ಇವರ ಜಾಲಿಗಳನ್ನು ಕೆಲ ವರ್ಷಗಳ ಹಿಂದೆ ಕಿತ್ತುಹಾಕಿದ್ದಾರೆ. ಅಲ್ಲಿಗೆ ಹೋಗದಿರುವುದರಿಂದ ಅದು ನನಗೆ ಇಲ್ಲಿಯವರೆಗೂ ತಿಳಿದಿರಲಿಲ್ಲ ಎಂದು ಅವರು ಹೇಳುತ್ತಾರೆ.

ಖಾದ್ರಿ ತಮ್ಮ ವೃತ್ತಿಯಲ್ಲಿ ಹಲವು ಬದಲಾವಣೆಯನ್ನು ಕಂಡವರು. ‘‘ನಾವು ವೃತ್ತಿ ಆರಂಭಿಸಿದಾಗ, ಯಾವ ವಸ್ತುಗಳೂ ಸುಲಭವಾಗಿ ಸಿಗುತ್ತಿರಲಿಲ್ಲ. ಲೋಹಲೇಪನದ ವಸ್ತುಗಳು ಸಿಗುತ್ತಿರಲಿಲ್ಲ. ಉತ್ತಮ ಗುಣಮಟ್ಟದ ಮರಮಟ್ಟುಗಳೂ ಇರಲಿಲ್ಲ. ಉತ್ತಮ ಗಾತ್ರದ ಗಾಜೂ ಲಭ್ಯ ಇರಲಿಲ್ಲ. ಆಗ ಅದು ವಿಭಿನ್ನ ಪ್ರಪಂಚ. ಈಗ ಉತ್ತಮ ಎಂದು ಹೇಳುವಂತಿಲ್ಲ. ಆದರೆ ಈಗ ಎಲ್ಲವೂ ಸುಲಭ. ಹೆಚ್ಚು ಅನುಕೂಲಕರ.’’
1980ರ ದಶಕದಲ್ಲಿ ಖಾದ್ರಿ ಮುಂಬೈ ಮಹಾನಗರ ಪಾಲಿಕೆಗೆ ಒಂದು ವರದಿ ಸಲ್ಲಿಸಿ, ಮುಂಬೈ ನಗರವನ್ನು ಹತ್ತು ವರ್ಷದ ಒಳಗಾಗಿ ಕೊಳಗೇರಿ ಮುಕ್ತ ನಗರವಾಗಿ ರೂಪಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಅಂಗೀಕರಿಸಿ ನಿರ್ಣಯವನ್ನೂ ಕೈಗೊಳ್ಳಲಾಯಿತು. ಆದರೆ ಆ ಸಂದರ್ಭದಲ್ಲಿ ಸರಕಾರ ಬದಲಾವಣೆಯಾದ ಕಾರಣ ಅದು ಫಲಪ್ರದವಾಗಲಿಲ್ಲ. 1990ರ ದಶಕದಲ್ಲಿ ಅವರು ಮತ್ತೆ ‘ಶರೀಫ್ ಆಫ್ ಮುಂಬೈ’ ಆಗಿ ಆಯ್ಕೆಯಾದಾಗ ಮತ್ತೆ ಪ್ರಸ್ತಾವನೆ ಸಲ್ಲಿಸುವ ಪ್ರಯತ್ನ ಮಾಡಿದರು. ಆದರೆ ಅವರ ಅವಧಿ ತೀರಾ ಕಡಿಮೆ ಇದ್ದ ಕಾರಣ ಅದು ಸಾಧ್ಯವಾಗಲಿಲ್ಲ.

‘‘ಮುಂಬೈ ಹಾನಿಗೆ ಮುಖ್ಯಕಾರಣವೆಂದರೆ, ಹಳೆಯ ಬಾಡಿಗೆ ನಿಯಂತ್ರಣ ಕಾಯ್ದೆ. ಈ ಕಾಯ್ದೆಯ ಅನ್ವಯ ಬಾಡಿಗೆಯನ್ನು ನಿಯಂತ್ರಿಸಲಾಗುತ್ತದೆ. ಇದರ ಪರಿಣಾಮ ವಾಗಿ ಮುಂಬೈನಲ್ಲಿ ಹಲವು ಬಾಡಿಗೆದಾರರು ಇಂದಿಗೂ ಕೇವಲ ತಿಂಗಳಿಗೆ 400 ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ಇಂಥ ಪ್ರದೇಶಗಳಲ್ಲಿ ವಾಸ್ತವವಾಗಿ ಮಾರುಕಟ್ಟೆ ದರ 20 ಸಾವಿರದಿಂದ 60 ಸಾವಿರವರೆಗೂ ಇದೆ. ನಾನು 1940ರ ದಶಕದಲ್ಲಿ ಮುಂಬೈಗೆ ಮೊದಲ ಬಾರಿಗೆ ಬಂದಾಗ ಸುಂದರ ಕಟ್ಟಡಗಳಿದ್ದವು. ಇಂದು ಸಾಧ್ಯವಾದಷ್ಟೂ ವಿರೂಪಗೊಂಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಬಾಡಿಗೆ ನಿಯಂತ್ರಣ ಕಾಯ್ದೆ. ವಾಸ್ತವವಾಗಿ ಹಂತಹಂತವಾಗಿ ಬಾಡಿಗೆಯನ್ನು ಹೆಚ್ಚಿಸಬೇಕಿತ್ತು. ಸಾರ್ವಜನಿಕ ಗೃಹನಿರ್ಮಾಣ ಕೂಡಾ ಸಾಕಷ್ಟು ಬೆಳೆಯುತ್ತಿಲ್ಲ. ಇದಕ್ಕೂ ಬಾಡಿಗೆ ನಿಯಂತ್ರಣ ಕಾಯ್ದೆ ಕಾರಣ. ಇಡೀ ಕೇಂದ್ರ ಮುಂಬೈನಲ್ಲಿ ಅವ್ಯವಸ್ಥೆ ಇದೆ’’
ಸರಕಾರಿ ಮಟ್ಟದಲ್ಲಿ ಕೂಡಾ ಮುಂಬೈನ ಯೋಜಿತ ಬೆಳವಣಿಗೆಯ ಸಮಗ್ರ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುವ ವಿನ್ಯಾಸಗಾರರಾಗಲಿ, ವಾಸ್ತುಶಿಲ್ಪಿಗಳಾಗಲಿ ಸರಕಾರದಲ್ಲಿಲ್ಲ ಎನ್ನುವುದು ಅವರ ಸ್ಪಷ್ಟ ನುಡಿ. ಖಾದ್ರಿಯವರ ಪ್ರಕಾರ, ‘‘ಕಟ್ಟಡಗಳ ಸಂಖ್ಯೆಯಲ್ಲಿ ಮಾತ್ರ ನಗರ ಬೆಳೆದಿದೆ. ಆದರೆ ಗುಂಪಿನ ರೂಪದಲ್ಲಿ ಬೆಳೆಯಬೇಕಿತ್ತು. 1950-60ರ ದಶಕದಲ್ಲೇ ನಗರ ಯೋಜನೆ ಪರಿಕಲ್ಪನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಇಂದಿನ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಇದು ಕೇಂದ್ರ ಮುಂಬೈ ಹಾಗೂ ಉಪನಗರಗಳ ನಡುವಿನ ವ್ಯತ್ಯಾಸ. ಆದರೆ ಉಪನಗರಗಳಲ್ಲಿ ಭೂಬಳಕೆ ಸಮರ್ಪಕವಾಗಿಲ್ಲ’’ ಎನ್ನುವುದು ಅವರ ಅಭಿಮತ.

ಅವರ ತಲೆಮಾರಿನ ಇತರ ವಾಸ್ತುಶಿಲ್ಪಿಗಳ ಬಗ್ಗೆ ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸದಿರಲು ನಿರ್ಧರಿಸಿದರು. ಆದರೆ ಚಂಡಿಗಡದ ಲೀ ಕೊರ್ಬಶೈರ್ ಅವರ ವಾಸ್ತುಶಿಲ್ಪದ ಬಗ್ಗೆ ತಮಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ‘‘ಆಸ್ಕರ್ ನಿಮುಯೇರ್ ಹಾಗೂ ಹಸನ್ ಫಾತಿ ಅವರ ಕೆಲಸ ನನಗೆ ಖುಷಿ. ಇವರು ವಿಶಿಷ್ಟ ಕಲ್ಪನೆಯ ವಾಸ್ತುಶಿಲ್ಪಿಗಳು. ಕೋರ್ಬಶೈರ್ ಒಬ್ಬ ವಾಸ್ತುಶಿಲ್ಪಿಯಲ್ಲ. ಅವರೊಬ್ಬ ಶಿಲ್ಪಿ. ಚಂಡಿಗಡದಲ್ಲಿ ಯಾವುದೇ ಕಟ್ಟಡದ ಮುಂದೆ ನಿಂತರೆ, ಅರ್ಥಹೀನ ಎನಿಸುವ ಭಾವನೆ ಬರುತ್ತದೆ. ಆ ರೀತಿ ಕಟ್ಟಡಗಳು ಇರಬಾರದು’’ ಎಂದು ಸ್ಪಷ್ಟಪಡಿಸುತ್ತಾರೆ.
ಖಾದ್ರಿ ತಮ್ಮ ಕಟ್ಟಡಗಳ ಮುಂದೆ ನಾಮಫಲಕಗಳನ್ನು ಹಾಕುವುದಿಲ್ಲ. ‘‘ಅವುಗಳಿಗೆ ತಮ್ಮದೇ ಆದ ಅಸ್ತಿತ್ವ ಹಾಗೂ ಗುರುತಿಸುವಿಕೆ ಇರಬೇಕು. ನಾವು ಶಿವಸಾಗರ ಎಸ್ಟೇಟ್‌ನಲ್ಲಿದ್ದೇವೆ. ಇಲ್ಲಿ ಯಾವುದಾದರೂ ಫಲಕಗಳನ್ನು ನೋಡಿದ್ದೀರಾ? ಕಕ್ಷಿದಾರರು ಮೊದಲು ಪ್ರತಿಭಟನೆಗೆ ಮುಂದಾದರು. ಎಲ್ಲಿಗೆ ಹೋಗಬೇಕು ಎಂದು ಟ್ಯಾಕ್ಸಿ ಚಾಲಕರಿಗೆ ಹೇಗೆ ಗೊತ್ತಾಗಬೇಕು? ಎಂದು ಕೇಳಿದರು. ಆದರೆ ಟ್ಯಾಕ್ಸಿ ಚಾಲಕರು ಕ್ರಮೇಣ ತಿಳಿದುಕೊಂಡರು. ಮಲಬಾರ್ ಹಿಲ್‌ನ ಸರಕಾರಿ ಅತಿಥಿಗೃಹ ಸಹ್ಯಾದ್ರಿಯಲ್ಲಿ ಕೂಡಾ ಲೆಟರ್ ಬಾಕ್ಸ್ ಬಿಟ್ಟರೆ ಬೇರೇನೂ ಇಲ್ಲ’’ ಎಂದು ಹೇಳುತ್ತಾರೆ.
ಯಾವುದು ಫೇವರಿಟ್ ವಿನ್ಯಾಸ ಎಂದು ಕೇಳಿದಾಗ, ‘‘ಎಲ್ಲವೂ’’ ಎಂಬ ಉತ್ತರ ಬಂತು. ‘‘ಅವೆಲ್ಲ ನನ್ನ ಮಕ್ಕಳು. ಅವುಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಪ್ರತಿ ಕ್ಷಣದಲ್ಲೂ ಅವು ನನ್ನ ಉತ್ತಮ ವಿನ್ಯಾಸಗಳಾಗಿದೆ’’

share
ಆಕಾಶ್ ಕರ್ಕರೆ
ಆಕಾಶ್ ಕರ್ಕರೆ
Next Story
X