Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದೇಶಪ್ರೇಮದ ಭೂತದ ಸುತ್ತ

ದೇಶಪ್ರೇಮದ ಭೂತದ ಸುತ್ತ

ಕಾರುಣ್ಯಕಾರುಣ್ಯ13 July 2016 10:33 PM IST
share
ದೇಶಪ್ರೇಮದ ಭೂತದ ಸುತ್ತ

 ‘ಇದೆಂಥಾ ದೇಶಪ್ರೇಮ ರೀ?’ ಯುವ ರಂಗಕರ್ಮಿ ಎಸ್. ಶಿಶಿರಂಜನ್ ಅವರು ಬರೆದಿರುವ ನಾಟಕ. ದೇಶಭಕ್ತಿ, ರಾಷ್ಟ್ರೀಯತೆಯಂತಹ ಜನಪ್ರಿಯ ಆದರ್ಶಗಳ ತಳಹದಿಯ ಮೇಲೆ ನಿಂತಿರುವ ಈ ನಾಟಕದ ವಸ್ತು ಚಿರಪರಿಚಿತವಾದುದು. ಇತಿಹಾಸ ಮತ್ತು ವರ್ತಮಾನಗಳ ಮುಖಾಮುಖಿಯೂ ಈ ನಾಟಕದಲ್ಲಿದೆ. ಇತಿಹಾಸದ ಪ್ರಸಂಗವೊಂದನ್ನು ಮುಂದಿಟ್ಟುಕೊಂಡು ಇಂದಿನ ಭಾರತೀಯರ ಮನಸ್ಥಿತಿಯನ್ನು ವ್ಯಂಗ್ಯವಾಡುವ ಪ್ರಯತ್ನವನ್ನು ನಾಟಕಕಾರರು ಈ ಕೃತಿಯಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಇತಿಹಾಸದ ಒಂದು ಸಣ್ಣ ಎಳೆಯಿದೆ. ತನ್ನ ಗಂಡ ದೇಶದ್ರೋಹವನ್ನು ಮಾಡಿ ಶತ್ರುಗಳ ಜೊತೆ ಕೈ ಜೋಡಿಸಿದಾಗ, ಪತ್ನಿ ಹೊನ್ನವ್ವ ಆತನ ಊಟದಲ್ಲಿ ವಿಷ ಇಕ್ಕಿ, ತಾನೂ ವಿಷ ಉಂಡು ಸಾಯುವುದು. ಈ ದೇಶಪ್ರೇಮದ ಕತೆಯನ್ನು ಮುಂದಿಟ್ಟುಕೊಂಡು ಇಂದಿನ ದೇಶದ ವರ್ತಮಾನವನ್ನು ಚರ್ಚಿಸುವುದು.

ನಾಟಕದ ಒಟ್ಟು ಆಶಯ, ಸದ್ಯದ ಬಲಪಂಥೀಯ ಆದರ್ಶಗಳೊಂದಿಗೆ ತಳಕು ಹಾಕುತ್ತದೆ. ರಾಷ್ಟ್ರೀಯತೆಯ ಆಶಯವೂ ಇದರಲ್ಲಿದೆ. ಅಂತೆಯೇ ಪ್ರಜಾಪ್ರಭುತ್ವವನ್ನು ಅಲ್ಲಲ್ಲಿ ವ್ಯಂಗ್ಯ ಮಾಡುತ್ತದೆ. ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್‌ರಂತಹ ವ್ಯಕ್ತಿತ್ವಕ್ಕಾಗಿ ನಾಟಕಕಾರರು ಹಪಹಪಿಸುತ್ತಾರೆ. ಆದರೆ ಈ ದೇಶದ ಮೂಲಭೂತ ಸಾಮಾಜಿಕ ಸಮಸ್ಯೆಗಳ ಕಡೆಗೆ ಕಣ್ಣಾಯಿಸುವುದಿಲ್ಲ. ಆದುದರಿಂದ ಇದೊಂದು ರೀತಿಯ ರಾಜಕೀಯ ನಾಟಕವೇ ಸರಿ. ಜಾತೀಯತೆ, ರೈತರ ಸಮಸ್ಯೆ, ಕೃಷಿಯ ಪತನ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಸೋಗಲಾಡಿತನ ಇವುಗಳೆಲ್ಲವೂ ದೇಶಪ್ರೇಮಕ್ಕಿರುವ ಅಡೆತಡೆಗಳು ಎನ್ನುವ ಆಳದ ನೋಟ ಈ ನಾಟಕದಲ್ಲಿಲ್ಲ. ಭಾವಾವೇಶಕ್ಕೊಳಗಾಗಿರುವ ಜನಪ್ರಿಯ ಆದರ್ಶವೇ ನಾಟಕಕಾರರ ಮುಖ್ಯ ಉದ್ದೇಶವಾಗಿದೆ. ಅದೇನೇ ಇರಲಿ, ಸ್ವಾರ್ಥವನ್ನು ಬಿಟ್ಟು ಜನಸೇವೆ, ದೇಶಸೇವೆ ಮಾಡಬೇಕು ಅನ್ನೋ ಉತ್ಕಟವಾದ, ಶ್ರೇಷ್ಠವಾದ, ಮನೋಭಾವವೊಂದನ್ನು ಈ ನಾಟಕದ ಮೂಲಕ ಕೃತಿಕಾರರು ನಿರೀಕ್ಷಿಸುತ್ತಾರೆ.

ಸುಮಾರು 11 ಪಾತ್ರಗಳಿರುವ ಈ ನಾಟಕ ರಂಗಪ್ರಯೋಗಕ್ಕೆ, ರಂಗಚಲನೆಗೆ ಪೂರಕವಾಗಿದೆ. ಸ್ಕಂದ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂ. ಆಸಕ್ತರು 9535802512 ದೂರವಾಣಿಯನ್ನು ಸಂಪರ್ಕಿಸಬಹುದು.
 

share
ಕಾರುಣ್ಯ
ಕಾರುಣ್ಯ
Next Story
X