ಹಣದ ಲಾಲಸೆಗಾಗಿ ಯಾವುದಕ್ಕೂ ಹೇಸದವರು
ಮಾನ್ಯರೆ,
ಸರಕಾರದ ‘ಯಶಸ್ವಿನಿ ಯೋಜನೆ’ಯ ಹಣದ ಲಾಭ ಪಡೆಯಲು ರಾಜ್ಯದ ಕೆಲವು ಸರಕಾರಿ ಆಸ್ಪತ್ರೆಗಳು ಮಹಿಳೆಯ ಗರ್ಭಕೋಶಗಳನ್ನೇ ತೆಗೆದು ಹಾಕಿರುವ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂತಹ ಘಟನೆಗಳು ನಿಜವೆಂದು ಕಂಡು ಬಂದರೆ ಈ ಬಗ್ಗೆ ಸರಕಾರ ಕೂಡಲೇ ಕ್ರಮಕೈಗೊಳ್ಳ ಬೇಕಾಗಿದೆ.
ಗರ್ಭಕೋಶ ಅಥವಾ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮೀಣ ಭಾಗದ ಮಹಿಳೆಯರು ಖಾಸಗಿ ಆಸ್ಪತ್ರೆಗಳಿಗೆ ಬಂದರೆ ಆಸ್ಪತ್ರೆ ಸಿಬ್ಬಂದಿ ಯೋಜನೆಯ ಹಣ ಪಡೆಯುವುದಕ್ಕೋಸ್ಕರ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶವನ್ನೇ ತೆಗೆದು ಹಾಕಿರುವುದು ಅಮಾನವೀಯ ಕೃತ್ಯವಾಗಿದೆ.
ಮಾನವೀಯ ವೌಲ್ಯ ಕಾಪಾಡಬೇಕಾದ ಆಸ್ಪತ್ರೆಗಳೇ ಹಣದ ಲಾಲಸೆಗಾಗಿ ಇಂತಹ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡರೆ ಬಡ ಜನರು ಯಾರನ್ನು ನಂಬಬೇಕು?
Next Story





