ಟಿಂಟು, ಲಲಿತಾ, ಸುಧಾ ಫೈನಲ್ ತಲುಪಲಿದ್ದಾರೆ: ಉಷಾ

ಬೆಂಗಳೂರು, ಜು.13: ‘‘ಮುಂದಿನ ತಿಂಗಳು ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಾದ ಟಿಂಟೂ ಲುಕಾ, ಲಲಿತಾ ಬಬರ್ ಹಾಗೂ ಸುಧಾ ಸಿಂಗ್ ತಾವು ಸ್ಪರ್ಧಿಸುವ ಇವೆಂಟ್‌ಗಳಲ್ಲಿ ಫೈನಲ್ ತಲುಪುವ ಉತ್ತಮ ಅವಕಾಶವಿದೆ’’ ಎಂದು ಭಾರತೀಯ ಓಟದ ದಂತಕತೆ ಪಿ.ಟಿ.ಉಷಾ ಆಶಾವಾದ ವ್ಯಕ್ತಪಡಿಸಿದರು.
ಅಥ್ಲೆಟಿಕ್ಸ್‌ನಲ್ಲಿ ಯಾರು ಪದಕ ಗೆಲ್ಲುತ್ತಾರೆಂದು ಹೇಳಲು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ. ನನ್ನ ಪ್ರಕಾರ ಟಿಂಟೂ ಲುಕಾ, ಲಲಿತಾ ಬಬರ್ ಹಾಗೂ ಸುಧಾ ಸಿಂಗ್ ಫೈನಲ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹೊಂದಿದ್ದಾರೆ. ಇವೆರಲ್ಲರೂ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ ಎಂದು ಸುದ್ದಿಸಂಸ್ಥೆಗೆ ಉಷಾ ತಿಳಿಸಿದರು.
ಟಿಂಟೂ, ಸುಧಾ ಹಾಗೂ ಲಲಿತಾ ಕ್ರಮವಾಗಿ 800 ಮೀ, 100 ಮೀ ಓಟ ಹಾಗೂ 3000 ಮೀ. ಸ್ಟೀಪಲ್ ಚೇಸ್ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ದ್ಯುತಿ ಚಂದ್‌ಗೆ ಅಭಿನಂದನೆ ಸಲ್ಲಿಸಿದ ಉಷಾ, ‘‘ದ್ಯುತಿ ಒಂದು ವೇಳೆ 100 ಮೀ. ಓಟದ ಸ್ಪರ್ಧೆಯಲ್ಲಿ 11.21 ನಿಮಿಷದಲ್ಲಿ ಗುರಿ ತಲುಪಿದರೆ ಸೆಮಿ ಫೈನಲ್ ತಲುಪುವುದು ಖಚಿತ. 11.26 ನಿಮಿಷ ಆಕೆಯ ಶ್ರೇಷ್ಠ ಪ್ರದರ್ಶನವಾಗಿದೆ’’ ಎಂದು ಹೇಳಿದರು.





