ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಉಡುಪಿ, ಜು.13: ಮನೆಯಲ್ಲಿ ಯಾರೂ ಇಲ್ಲದ ಸಮಯ ಮಹಿಳೆಯೊಬ್ಬರು ಕೋಣೆಯೊಂದರ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿ ಬಳಿ ಸಂಭವಿಸಿದೆ.
ಲಕ್ಷ್ಮೀ ಆಚಾರ್ಯ ಮೃತ ಮಹಿಳೆಯಾಗಿದ್ದಾರೆ. ಕೆಲಸಕ್ಕೆ ಮನೆಯಿಂದ ಹೊರ ಹೋಗಿದ್ದ ಪತಿ ಹಾಗೂ ಮಗ ಮಧ್ಯಾಹ್ನ ಊಟಕ್ಕೆಂದು ಮರಳಿ ಬಂದಾಗ ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲಿಗೆ ಚಿಲಕ ಹಾಕಿತ್ತು. ಬಾಗಿಲು ತೆರೆಯದೇ ಇದ್ದಾಗ ಹಿಂದಿನ ಬಾಗಿಲು ತೆರೆದು ಒಳಗೆ ಬಂದು ನೋಡಿದಾಗ ಲಕ್ಷ್ಮೀ ಆಚಾರ್ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೈಲಾನ್ ಸೀರೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಮೃತರ ಮಗಳು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





