ಭಾರತೀಯ ರಿಲೇ ತಂಡಗಳಿಗೆ ಒಲಿಂಪಿಕ್ಸ್ ಟಿಕೆಟ್
ಬೆಂಗಳೂರು, ಜು.13: ಭಾರತೀಯ ಪುರುಷರ ಹಾಗೂ ಮಹಿಳಾ 4-400 ಮೀ. ರಿಲೇ ತಂಡಗಳು ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿವೆ ಎಂದು ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್)ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ.
ಐಎಎಎಫ್ ಅಗ್ರ-16 ಪಟ್ಟಿಯಲ್ಲಿರುವ ದೇಶಗಳ ಹೆಸರನ್ನು ಪ್ರಕಟಿಸಿದ್ದು, ಭಾರತದ ಪುರುಷರ ತಂಡ 15ನೆ ಸ್ಥಾನದಲ್ಲಿತ್ತು. ಮಹಿಳೆಯರ ಶ್ರೇಷ್ಠ ರಿಲೇ ಪ್ರದರ್ಶನಕಾರರ ಪಟ್ಟಿಯಲ್ಲಿ ಕೇರಳದ ಅನಿಲ್ಡಾ ಥಾಮಸ್ 14ನೆ ರ್ಯಾಂಕಿನಲ್ಲಿದ್ದಾರೆ.
ಬೆಂಗಳೂರಿನ ಶ್ರೀಕಂಠೀವರ ಸ್ಟೇಡಿಯಂನಲ್ಲಿ ನಡೆದ ಅಥ್ಲೆಟಿಕ್ ಕೂಟದಲ್ಲಿ ಭಾರತದ ಮಹಿಳೆಯರು 3:27.88 ನಿಮಿಷದಲ್ಲಿ ಗುರಿ ತಲುಪಿರುವುದು ಅರ್ಹತೆಗೆ ಪೂರಕವಾಗಿತ್ತು. ಮಹಿಳೆಯರ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಷ್ಯಾದ ಏಕೈಕ ತಂಡವಾಗಿದೆ.
Next Story





