ಅಂಗಡಿಗೆ ನುಗ್ಗಿ ಹಲ್ಲೆ: ದೂರು
ಮಂಗಳೂರು, ಜು.13: ನಗರದ ಹಂಪನಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರ ತಂಡ ಮಳಿಗೆಯ ಮಾಲಕನಿಗೆ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವೆಲೆನ್ಸಿಯಾದ ನಿವಾಸಿ ಹಮೀದ್ ಎಂಬವರು ಹಂಪನಕಟ್ಟೆಯಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದು, ಮಂಗಳವಾರ ರಾತ್ರಿ ಬಿ.ಸಿ.ರೋಡ್‌ನ ಹಮೀದ್ ಮತ್ತಿತರ ಮೂವರು ಮಳಿಗೆಗೆ ಬಂದು ನಿನ್ನ ಅಂಗಡಿಗೆ ಉತ್ತಮ ವ್ಯಾಪಾರವಿದ್ದು, 2 ಲಕ್ಷ ರೂ.ನೀಡುವಂತೆ ಒತ್ತಾಯಿಸಿದ್ದರು. ಅಂಗಡಿ ಮಾಲಕ ಹಣ ನೀಡಲು ನಿರಾಕರಿಸಿದಾಗ ತಂಡ ಹಲ್ಲೆ ಮಾಡಿದೆ ಎಂದು ಅಲ್ತಾಫ್ ಆರೋಪಿಸಿದ್ದಾರೆ.
ಈ ಬಗ್ಗೆ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





