ಕೃಷ್ಣರಾವ್ ಉಡುಪಿ, ಜು.13: ತೆಂಕನಿಡಿಯೂರಿನ ಡಾ.ಟಿ.ಕೃಷ್ಣ ರಾವ್ (73) ಬುಧವಾರ ಸ್ವಗೃಹದಲ್ಲಿ ನಿಧನರಾದರು. 41 ವರ್ಷ ಸುದೀರ್ಘ ವೈದ್ಯಕೀಯ ಸೇವೆ ಸಲ್ಲಿಸಿರುವ ಇವರು ಶ್ರೀಕೃಷ್ಣ ಮಠದ ಉಚಿತ ಚಿಕಿತ್ಸಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.