ರಿಯೋ ವಾತಾವರಣಕ್ಕೆ ಹೊಂದಿಕೊಳ್ಳುವುದು ದೊಡ್ಡ ಸವಾಲು:ಸೈನಾ

ಬೆಂಗಳೂರು, ಜು.13: ‘‘ರಿಯೋ ಒಲಿಂಪಿಕ್ಸ್‌ನ ವೇಳೆ ಅಲ್ಲಿನ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುವುದು ಕಠಿಣ ಸವಾಲಾಗಿದೆ’’ ಎಂದು ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ಭಾರತದ ಶಟ್ಲರ್ ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷಾಂತ್ಯದಲ್ಲಿ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸೈನಾ ಕಳೆದ ತಿಂಗಳು ಆಸ್ಟ್ರೇಲಿಯ ಓಪನ್ ಸೂಪರ್ ಸರಣಿ ಜಯಿಸಿ ಆತ್ಮವಿಶಾಸ ಹೆಚ್ಚಿಸಿಕೊಂಡಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಮೂರನೆ ಬಾರಿ ಭಾಗವಹಿಸುತ್ತಿರುವ ಸೈನಾ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.
‘‘ಬ್ರೆಝಿಲ್ ವಾತಾವರಣಕ್ಕೆ ಹೊಂದಿಕೊಳ್ಳುವುದರ ಮೇಲೆ ಎಲವೂ ಅವಲಂಬಿಸಿರುತ್ತದೆ. ಅದು ಅತ್ಯಂತ ಮುಖ್ಯ ಸಂಗತಿ. ಒಲಿಂಪಿಕ್ಸ್‌ಗೆ ಒಂದು ವಾರ ಮುಂಚಿತವಾಗಿ ಆಸ್ಟ್ರೇಲಿಯ ಓಪನ್ ನಡೆಯುತ್ತಿದ್ದರೆ ಅದು ಪರಿಣಾಮ ಬೀರುತ್ತಿತ್ತು. ಎಲ್ಲ ಆಟಗಾರರಿಗೆ ತಯಾರಿ ನಡೆಸಲು ಸಮಯಾವಕಾಶ ಬೇಕು’’ ಎಂದರು.
Next Story





